ಬೆಳಗಾವಿ : ಹುಬ್ಬಳ್ಳಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ನ ಪೋಷಕರಿಬ್ಬರೂ ಶಾಲಾ ಶಿಕ್ಷಕರು ಎಂಬ ಮಾಹಿತಿ ಇದೀಗ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.
ವಿದ್ಯೆ ತಲೆಗೆ ಹತ್ತಿಸಿಕೊಳ್ಳದ ಆತ ಕಾಲೇಜಿನಿಂದ ಫೇಲ್ ಆಗಿ ಹೊರಕ್ಕೆ ಬಿದ್ದಿದ್ದ. ಇದೀಗ ಹಳೇ ಸಹಪಾಠಿಯನ್ನೇ ಕೊಲೆ ಮಾಡಿದ್ದಾನೆ. ಆಕೆಯನ್ನು ಕೊಲ್ಲಲು ಚಾಕು ಹಿಡಿದುಕೊಂಡು ಕಾಲೇಜ್ ಕ್ಯಾಂಪಸ್ಗೆ ಬಂದಿದ್ದ ಎಂಬ ಮಾಹಿತಿ ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ.
ಆರೋಪಿ ಫಯಾಜ್ ಮೂಲತಃ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿ. ತಂದೆ ಬಾಬಾಸಾಬ್, ತಾಯಿ ಮುಮ್ತಾಜ್ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರು.
ಫಯಾಜ್ ಫೇಲ್ ಆಗಿದ್ದರಿಂದ ಕಾಲೇಜ್ ಬಿಟ್ಟಿದ್ದ. ಆತ ಹುಬ್ಬಳ್ಳಿ ಕಾಲೇಜಿನಲ್ಲಿ ಬಿಸಿಎ ಕೋರ್ಸ್ನಲ್ಲಿ ಫೇಲ್ ಆಗಿದ್ದ. ಬಿಸಿಎ ಕಲಿಯುವಾಗ ವೇಳೆ ನೇಹಾ ಆತನ ಕ್ಲಾಸ್ಮೇಟ್ .
ಹಲವು ಸಮಯದಿಂದ ಆಕೆಯ ಹಿಂದೆ ಬಿದ್ದಿದ್ದ ಫಯಾಜ್ ಪ್ರೀತಿ ಮಾಡುವಂತೆ ಸತಾಯಿಸಿದ್ದ. ಆದರೆ ಅದಕ್ಕೆ ನಿರಾಕರಿಸಿದ್ದಳು. ಇದರಿಂದ ಗುರುವಾರ ಕಾಲೇಜಿಗೆ ಚಾಕು ಸಮೇತ ಬಂದು ಬರ್ಬರವಾಗಿ ಕೊಲೆ ಮಾಡಿದ್ದಾನೆ.