ಖಾನಾಪುರ : ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರ ಅನುದಾನದಲ್ಲಿ ಸುಮಾರು ₹15 ಲಕ್ಷ ಮೊತ್ತದಲ್ಲಿ ಬೋಗೂರ ಗ್ರಾಮದ ಎಸ್ಸಿ ಕಾಲೋನಿಯ ಹತ್ತಿರ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ಶ್ರೀ ಹನುಮಂತ ದೇವಸ್ಥಾನದವರೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಪ್ರಾರಂಭವಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡ ಸುಂದರ ಕುಲಕರ್ಣಿ ಮಾತನಾಡಿ, “ನಮ್ಮ ಗ್ರಾಮಕ್ಕೆ ಈ ಮಹತ್ವದ ಅನುದಾನ ನೀಡಿದ ಶಾಸಕ ವಿಠ್ಠಲ ಹಲಗೆಕರ ಅವರ ಕಾರ್ಯ ಅಭಿನಂದನೀಯ.
ಈ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಗ್ರಾಮಸ್ಥರಿಗೆ ಪ್ರಯಾಣ ಸುಗಮವಾಗಲಿದೆ ಎಂದು ಹೇಳಿದರು.