ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಶಿವಸೇನಾ ಮತ್ತು ಎಂ ಇ ಎಸ್ ಮುಖಂಡರಿಗೆ ಬೆಳಗಾವಿ ಜಿಲ್ಲೆ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ.
ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ಹಾಗೂ ಕೊಲ್ಹಾಪುರ ಜಿಲ್ಲಾ ಶಿವಸೇನೆ(ಉದ್ದವ ಬಣ) ಅಧ್ಯಕ್ಷ ವಿಜಯ ಶಾಮರಾವ್ ದೇವಣೆ ಹಾಗೂ ಇತರೆ ಎಂ.ಇ.ಎಸ್/ಶಿವಸೇನೆ ಕಾರ್ಯಕರ್ತರನ್ನು ಬೆಳಗಾವಿ ಜಿಲ್ಲೆಯ ಗಡಿಯೊಳಗೆ ಪ್ರವೇಶಿಸದಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.

 
             
         
         
        
 
  
        
 
    