ಕಾಗವಾಡ: ‘ಬಿಜೆಪಿ ಪರಿಸ್ಥಿತಿ ಈಗ, ಮನೆಯೊಂದು ಆರು ಬಾಗಿಲಿನಂತಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ಈಗ ಎಲ್ಲವೂ ಸರಿ ಇಲ್ಲ. ಅಲ್ಲಿ ಮನೆಯೊಂದು ಮೂರು ಬಾಗಿಲಲ್ಲ, ಆರು ಬಾಗಿಲು ಆಗಿವೆ. ಅಲ್ಲಿ ಶ್ರೀರಾಮುಲು ಮಾತ್ರವಲ್ಲ; ಹಲವರಿಗೆ ಸಮಸ್ಯೆಗಳಿವೆ. ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹೊಸ ಸಮಸ್ಯೆಗಳು ಹುಟ್ಟುತ್ತಲೇ ಇವೆ ಎಂದು ದೂರಿದರು.
ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಮಧ್ಯೆ ಇರುವ ವೈಮನಸ್ಸು ಈಗ ಭುಗಿಲೆದ್ದಿದೆ. ಶ್ರೀರಾಮಲು ನೊಂದಿದ್ದಾರೆ. ಬಿಜೆಪಿಯಲ್ಲಿ ಮೂರಲ್ಲ, ಆರು ಬಾಗಿಲು ದಾಟಿ ಬಂದಿದ್ದಾರೆ. ನಾನೇನು ಅವರನ್ನು ಸಂಪರ್ಕಿಸಿಲ್ಲ. ಅವರು ಕಾಂಗ್ರೆಸ್ಗೆ ಬರುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡೋಣ’ ಎಂದರು.
ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ಕೆಲವರು ಬರುತ್ತಾರೆ, ಕೆಲವರು ಹೋಗುತ್ತಾರೆ. ಇದರಿಂದ ರಾಷ್ಟ್ರೀಯ ಪಕ್ಷಗಳಿಗೆ ಯಾವ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.