This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಕೊಳ್ಳೇಗಾಲದಲ್ಲೂ ಬಿಜೆಪಿ ವಿಜಯ ದುಂದುಭಿ BJP wins in Kolegala too


 

ಕೊಳ್ಳೇಗಾಲ :
ಕೊಳ್ಳೇಗಾಲ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ನಗರಸಭೆ 7ವಾರ್ಡ್ ಗಳಿಗೆ ನಡೆದ ಉಪಚುನಾವಣೆಯಲ್ಲಿ 6ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೆ 1ವಾರ್ಡ್ ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಸದಸ್ಯತ್ವ ಅನರ್ಹಗೊಂಡಿದ್ದ 7ಸದಸ್ಯರಲ್ಲಿ 6ಜನ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಇವರಲ್ಲಿ ಐವರು ಗೆಲುವು ಸಾಧಿಸಿದ್ದರೆ ಎರಡನೇ ವಾರ್ಡಿನಿಂದ ಸ್ಪರ್ಧೆಗಿಳಿದಿದ್ದ ನಾಗಮಣಿ ಎಂಬುವವರು ಮಾತ್ರ ಸೋತಿದ್ದಾರೆ.
ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸುವುದರೊಂದಿಗೆ ಶಾಸಕ ಎನ್. ಮಹೇಶ
ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ. ಅವರನ್ನು ಬಿಎಸ್ ಪಿಯಿಂದ ಉಚ್ಚಾಟನೆ ಮಾಡಿದ ಬಳಿಕ ಅವರ ಬೆಂಬಲಿಗರಾಗಿದ್ದ ನಗರಸಭಾ ಸದಸ್ಯರು ಸಹ ಬಿಜೆಪಿ ಸೇರ್ಪಡೆಗೊಂಡಿದ್ದರು.ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಸದಸ್ಯರೊಂದಿಗೆ ಕೈಜೋಡಿಸಿ ಅಧಿಕಾರ ಹಿಡಿದಿದ್ದರು. ಪಕ್ಷದ ವಿಪ್ ಉಲ್ಲಂಘಿಸಿದನ್ನು ಬಿಎಸ್ಪಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿತ್ತು. ಕೊನೆಗೂ ನ್ಯಾಯಾಲಯ 7ಮಂದಿಯ ಸದಸ್ಯತ್ವ ಅನರ್ಹಗೊಳಿಸಿತ್ತು. ಇದೀಗ ನಡೆದ ಚುನಾವಣೆಯಲ್ಲಿ ಈ ಸದಸ್ಯರು ಬಿಜೆಪಿಯಿಂದ ಸ್ಪರ್ಧಿಸಿ ಕಮಲದ ಕಹಳೆ ಊದಲು ಕಾರಣರಾಗಿದ್ದಾರೆ.


Jana Jeevala
the authorJana Jeevala

Leave a Reply