ರಾಯಚೂರು :
ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಕೊನೆಗೂ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ. ಕೆಲ ದಿನಗಳ ಹಿಂದೆ ಅವರು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರ ನಾಯಕರನ್ನು ಭೇಟಿಯಾಗಿ ತಮ್ಮ ಹಳೆ ಪಕ್ಷ ಸೇರುವ ಸುಳಿವು ನೀಡಿದ್ದರು. ಇದೀಗ ಅವರು ತಾನು ಕಾಂಗ್ರೆಸ್ ಪಕ್ಷ ಸೇರುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ.
ನನ್ನ ರಕ್ತನೇ ಕಾಂಗ್ರೆಸ್ , ಹೌದು ನಾನು ಕಾಂಗ್ರೆಸ್ ಸೇರುತ್ತೇನೆಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಉತ್ತರಾಯಣ ಪುಣ್ಯ ಕಾಲಕ್ಕೆ ಮುಂಚೆ ಬಂದು ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದಿದ್ದೇನೆ. ಪಥ ಬದಲಿಸುವ ಕಾಲಕ್ಕೆ ದೇವರ ದರ್ಶನ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ನಾನು ಒಟ್ಟಿಗೆ ಬೆಳೆದವರು. ಲಾ ಕೂಡ ಒಟ್ಟಿಗೆ ಮಾಡಿದ್ದೇವೆ. ರಾಜಕೀಯದಲ್ಲಿ ಸಿದ್ದರಾಮಯ್ಯಗಿಂತ ನಾನು ಹಿರಿಯ ಎಂದಿದ್ದಾರೆ . ರಾಜಕಾರಣ ಒಂದು ಕುಟುಂಬ . ಅಣ್ಣ , ತಮ್ಮ ಮುನಿಸಿಕೊಂಡು ಹೊರಹೋಗ್ತಾರೆ ವಾಪಸ್ ಬರ್ತಾರೆ . ಪ್ರತಾಪ್ ಗೌಡ ಪಾಟೀಲ್ ಹಾಗೂ ನನಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ನಾನು ಸಾಹಿತ್ಯ ಕ್ಷೇತ್ರದ ಎಂಎಲ್ಸಿ. ಬಿಜೆಪಿ ಎಂಎಲ್ಸಿ ಅಲ್ಲ. ರಾಜ್ಯಪಾಲರು ಬಿಜೆಪಿಯಿಂದ ರಾಜೀನಾಮೆ ಪಡೆದ ಬಳಿಕ ನಾಮಕರಣ ಮಾಡಿದ್ದಾರೆ.
ಬಹಳ ಜನರಿಗೆ ಇದು ಗೊತ್ತಿಲ್ಲ. ನಾನು ಯಾವ ಪಕ್ಷದಲ್ಲಿಲ್ಲ. ಸ್ವತಂತ್ರ ವ್ಯಕ್ತಿ ಎಂದು
ಪ್ರತಿಕ್ರಿಯೆ ನೀಡಿದ್ದಾರೆ.