ದೆಹಲಿ :
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ 400 ಸ್ಥಾನ ಗೆಲ್ಲಲು ಸಿದ್ಧತೆ ನಡೆಸಿದೆ.
ಕಳೆದ ಸಲಕ್ಕಿಂತ ಹೆಚ್ಚು ಸ್ಥಾನದಲ್ಲಿ ಸ್ಪರ್ಧೆಗೆ ಚಿಂತನೆ ನಡೆಸಿದೆ. 160 ದುರ್ಬಲ ಕ್ಷೇತ್ರಗಳ ಮೇಲೆ ಬಿಜೆಪಿ ಗಮನ ಕೇಂದ್ರೀಕರಿಸಿದ್ದು ಅಲ್ಲಿ ಇತರ ಪಕ್ಷಗಳ ನಾಯಕರನ್ನು ಸೆಳೆಯಲು ಬಿಜೆಪಿಯಿಂದ ಸಮಿತಿ ರಚನೆ ಮಾಡಲಾಗುತ್ತಿದೆ. ಬಿಜೆಪಿ ದುರ್ಬಲವಾಗಿರುವ ಕಡೆ ಅವರನ್ನು ನಿಲ್ಲಿಸಿ ಆ ಸ್ಥಾನಗಳನ್ನು ಗೆಲ್ಲಲು ಪಣ ತೊಟ್ಟಿದೆ.
ಬಿಜೆಪಿಯ ಯೋಜನೆ ಫಲಿಸಿದರೆ ಮಿತ್ರ ಪಕ್ಷಗಳಿಗೆ ಈ ಬಾರಿ ಕಡಿಮೆ ಸ್ಥಾನಗಳನ್ನು ಹಂಚಲಾಗುತ್ತದೆ.
ದೇಶದಲ್ಲಿ ಒಟ್ಟು 543 ಲೋಕಸಭಾ ಮತಕ್ಷೇತ್ರಗಳಿವೆ. ಬಿಜೆಪಿ ಕಳೆದ ಚುನಾವಣೆಯಲ್ಲಿ 303 ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ, ಈ ಬಾರಿ 400 ಸ್ಥಾನಗಳ ಗಡಿ ದಾಟಲು ಸಿದ್ಧತೆ ನಡೆಸಿದೆ. ಕಳೆದ ಸಲ ಸೋತ 136 ಸ್ಥಾನಗಳ ಮೇಲೆ ಪಕ್ಷ ಗಮನ ಕೇಂದ್ರೀಕರಿಸಲಿದೆ. ಕಳೆದ ಸಲ 486 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ನಡೆಸಿಸಿತ್ತು. ಈ ಸಲ 486 ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಮೂಲಕ ಈ ಬಾರಿ 400 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಆಶಯವನ್ನು ಹೊಂದಿದೆ. 1984ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ 400 ಕ್ಕೂ ಹೆಚ್ಚು ಸ್ಥಾನ ಗೆದ್ದು ಸಾಧನೆ ಮಾಡಿತ್ತು. ನಂತರ ಯಾವ ಪಕ್ಷವೂ ಏಕಾಂಗಿಯಾಗಿ 400 ಸ್ಥಾನದ ಗಡಿ ದಾಟಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ 400 ಸ್ಥಾನ ಗೆದ್ದೇ ಗೆಲ್ಲಬೇಕೆಂಬ ತವಕದಲ್ಲಿದೆ.