ಬೆಳಗಾವಿ/ಹಂಪಿ:
ಬೆಳಗಾವಿ ಪ್ರದೇಶದ ಮುಸ್ಲಿಂ ಸಮುದಾಯಗಳು ಚಾರಿತ್ರಿಕ ಅಧ್ಯಯನ(ವಸಾಹತು ಕಾಲದಿಂದ, ಕರ್ನಾಟಕ ಏಕೀಕರಣವರೆಗೆ)ವಿಷಯದಲ್ಲಿ ಬಿಸ್ಮಿಲ್ಲಾ ಬೇಗಂ ಜೆ. ಕಾಲಿಮಿರ್ಚಿ ಡಾಕ್ಟರೇಟ್ ಪಡೆದಿದ್ದಾರೆ.
ಇತ್ತೀಚೆಗೆ ನಡೆದ ಹಂಪಿ ಕನ್ನಡ ವಿವಿಯ 31ನೇ ವಾರ್ಷಿಕ ಘಟಿಕೋತ್ಸವದಲ್ಲಿ ಘನತೆವೆತ್ತ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಡಾಕ್ಟರೇಟ್ ಪ್ರದಾನ ಮಾಡಿದರು.
ಪ್ರೊ. ಡಾ.ಚಂದ್ರಶೇಖರ್ ಬಿ. ತಬೋಜಿ ಮಾರ್ಗದರ್ಶನ ಮಾಡಿದ್ದರು. ಬಿಸ್ಮಿಲ್ಲಾ ಬೇಗಂ ಅವರ ಸಾಧನೆಗೆ ಅವರ ಪತಿ ಪೊಲೀಸ್ ಇನ್ಸಪೆಕ್ಟರ್ ಜೆ. ಎಂ. ಕಾಲಿಮಿರ್ಚಿ, ಕುಟುಂಬ ವರ್ಗ ಹಾಗೂ ಅಪಾರ ಹಿತೈಷಿಗಳು ಬಂಧು-ಬಳಗ ಅಭಿನಂದಿಸಿದ್ದಾರೆ.