This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಬಿಜೆಪಿ ಯುವ ಧುರೀಣ ಚಿದಾನಂದ ಸವದಿ ಸಂಭ್ರಮದ ಹುಟ್ಟು ಹಬ್ಬ ಆಚರಣೆ Birthday celebration of BJP youth leader Chidananda Savadi


 

ಅಥಣಿ :
ಬಿಜೆಪಿ ಯುವ ಧುರೀಣ ಚಿದಾನಂದ ಸವದಿಯವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಜನ್ಮದಿನದ ಅಂಗವಾಗಿ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಶುಭಾಶಯ ಕೋರಿದರು. ಚಿಕ್ಕೋಡಿ ಜಿಲ್ಲೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಚಿದಾನಂದ ಸವದಿ ಈಗಾಗಲೇ ಕಾರ್ಯನಿರ್ವಹಿಸಿ ಅನುಭವ ಹೊಂದಿದ್ದಾರೆ. ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಚಿದಾನಂದ ಸವದಿ ಅವರು ಪಕ್ಷ ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಅವರು ಮುಂದಿನ ದಿನಗಳಲ್ಲಿ ತಂದೆ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯರಾಗಿರುವ ಲಕ್ಷ್ಮಣ ಸವದಿ ಅವರಂತೆ ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡುವ ಹಾದಿಯಲ್ಲಿದ್ದಾರೆ. ಜನರನ್ನು ಆಕರ್ಷಿಸುವ ವರ್ಚಸ್ಸು ಹೊಂದಿರುವ ಜನಪರ ನಾಯಕ ಚಿದಾನಂದ ಸವದಿ ಅವರು ಬರುವ ದಿನಗಳಲ್ಲಿ ಇನ್ನಷ್ಟು ಸಮಾಜ ಸೇವೆ ಮಾಡುವಂತಾಗಲಿ. ದೇವರು ಅವರಿಗೆ ಆಯುರಾರೋಗ್ಯ ಅಯುಷ್ಯ ನೀಡಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿಕೊಂಡರು.


Jana Jeevala
the authorJana Jeevala

Leave a Reply