ಬೆಳಗಾವಿ: ಕರ್ನಾಟಕ ರಾಜ್ಯದಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿಯು ಇಂಡಿಯಾ ಟುಡೇ ಇವರು ನಡೆಸಿದ ಬೆಸ್ಟ್ ಮೆಡಿಕಲ್ ಕಾಲೇಜು ಸರ್ವೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದುಕೊಂಡಿರುವುದು ಬಿಮ್ಸ್ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಅದರ ಜೊತೆ-ಜೊತೆಗೆ 2025 -26ನೇ ಸಾಲಿಗೆ MBBS ಸೀಟಗಳ ಪ್ರವೇಶಾತಿ ಮಿತಿಯನ್ನು150 ರಿಂದ 200ಕ್ಕೆ ಹೆಚ್ಚಳವಾಗಿರುವುದು ಸಂಸ್ಥೆಗೆ ಮತ್ತೊಂದು ಹೆಮ್ಮೆಯ ಗರಿಯನ್ನು ಮೂಡಿಸಿದೆ.
ಕರ್ನಾಟಕದಲ್ಲಿ ಎರಡನೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯು ಎಲ್ಲ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಕೊಡುಗೆಯನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ಬೆಳಗಾವಿಯ ಇನ್ನೊಂದು ಭಾಗವಾದ ಬಿಮ್ಸ್ ಸಂಸ್ಥೆಯು ಬಡರೋಗಿಗಳ ಆರೈಕೆಯಲ್ಲಿ ಮುಂಚೂಣಿಯಲ್ಲಿದ್ದು, ಅದರ ಜೊತೆಗೆ ಶೈಕ್ಷಣಿಕವಾಗಿ ತನ್ನದೆ ಆದ ಸಾಲು ಸಾಲು ಸಾಧನೆಗಳಲ್ಲಿ ಮುಂದಿದೆ. ಅದರ ಸಾಧನೆಗೆ ಸಾಕ್ಷಿಯಾಗಿ ಇದೀಗ 2025 -26ನೇ ಸಾಲಿಗೆ MBBS ಸೀಟಗಳ ಪ್ರವೇಶಾತಿ ಮಿತಿಯನ್ನು 150 ರಿಂದ 200 ಕ್ಕೆ ಹೆಚ್ಚಿಸಿಕೊಂಡಿರುವುದು ಗ್ರಾಮೀಣ ಭಾಗದ ಬಡವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣಕ್ಕೆ ಅನುಕೂಲಕರವಾಗಲಿದೆ.
National Medical Council, ನವದೆಹಲಿಯೂ 2025 -26ನೇ ಸಾಲಿಗೆ MBBS ಸೀಟಗಳ ಪ್ರವೇಶಾತಿ ಹೆಚ್ಚಳ ಮಾಡಿ ಅಧೀಕೃತ ಆದೇಶವನ್ನು ಹೊರಡಿಸಿದ್ದಾರೆ. ಇದಕ್ಕೆ ಕಾರಣಿಕರ್ತರಾದ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಯವರಿಗೆ ಈ ಸಂಸ್ಥೆಯ ಹೆಮ್ಮೆಯ ನಿರ್ದೇಶಕ ಡಾ. ಅಶೋಕ್ ಕುಮಾರ್ ಶೆಟ್ಟಿ ಅವರು ಅಭಿನಂದನೆಯನ್ನು ತಿಳಿಸಿದ್ದಾರೆ.