ಬೆಳಗಾವಿ : ಬೈಲಹೊಂಗಲ ತಾಲೂಕು ಹಳೆ ಜಾಲಿಕೊಪ್ಪ ಗ್ರಾಮದ ಮಲಪ್ರಭಾ ನದಿ ಬಳಿ ಬೈಕ್ ಹಾಗೂ ಬಸ್ ನಡುವೆ ಶುಕ್ರವಾರ ಭೀಕರ ಅಪಘಾತ ಸಂಭವಿಸಿದ್ದು ತುರಮರಿ ಗ್ರಾಮದ ರಾಮಲಿಂಗ ಫಕೀರಪ್ಪ ಶಿಂಗಾಡಿ(40)ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಬೈಲಹೊಂಗಲದಿಂದ ತುರುಮರಿ ಗ್ರಾಮಕ್ಕೆ ಆಗಮಿಸುತ್ತಿದ್ದಾಗ ಬೆಳಗಾವಿ ಘಟಕಕ್ಕೆ ಸೇರಿದ ಬಸ್ ಯಲ್ಲಮ್ಮನ ಗುಡ್ಡದಿಂದ ಬೈಲಹೊಂಗಲ ಕಡೆ ಬರುವಾಗ ಮಲಪ್ರಭಾ ನದಿ ಬಳಿ ದುರ್ಘಟನೆ ಸಂಭವಿಸಿದೆ. ಬೈಕ್ ಡಿಕ್ಕಿಯಾದ ರಭಸಕ್ಕೆ ಬೈಕ್ ಬಸ್ಸಿನ ಮುಂಭಾಗಕ್ಕೆ ಸಿಲುಕಿತು. ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಭೀಕರ ಅಪಘಾತಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಸಾವು
