ಆಸ್ಪತ್ರೆ ಬಿಲ್ ಕಟ್ಟಬೇಕಾಗುತ್ತದೆ ಎಂದು ಕೊಲೆಯಾದವನ ಶವ ಬಿಟ್ಟು ಹೋದ ಬಿಹಾರಿಗಳು..!
ಪತ್ನಿ, ಕುಟುಂಬ,ಸಂಬಂಧಿಕರಿಗೆ ಬೇಡವಾದ ಬಿಹಾರಿಯ ಶವಸಂಸ್ಕಾರ ಮಾಡಿದ ಕಾಕತಿ ಪೊಲೀಸರು ..!
ಬೆಳಗಾವಿ : ಇದೆ ಆಗಸ್ಟ್ 07 ರಂದು ರಾತ್ರಿ ಮನ್ವಿಕಾ ಎಂಟರ್ಪ್ರೈಸಸ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ರಾಜ್ಯದ ಮುಕೇಶಕುಮಾರ ಶಂಕರ ಪಾಂಡೆ, (34) ಇವನನ್ನು ಅದೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಪ್ರಾಪ್ರ ಬಾಲಕರು ಕ್ಷುಲಕ ಕಾರಣಕ್ಕೆ ತಂಟೆ ಮಾಡಿಕೊಂಡು ಇಬ್ಬರೂ ಸೇರಿ ಮುಕೇಶಕುಮಾರನ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಬಗ್ಗೆ ಮನ್ವಿಕಾ ಎಂಟಪ್ರೈಸಸ್ ಪ್ಯಾಕ್ಟರಿ ಮಾಲೀಕ ಮಂಜುನಾಥ ವಿಜಯ ಲೋಗಾವಿ ರವರು ನೀಡಿದ ದೂರಿನಂತೆ ಕಾಕತಿ ಠಾಣೆ ಪ್ರ. ಸಂ.173/2025 ಕಲಂ.103(1) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಕೊಲೆ ಮಾಡಿ ಪರಾರಿಯಾದ ಬಾಲಕರ ಜಾಡು ಹಿಡಿದು, ಮಾಹಿತಿ ಕಲೆ ಹಾಕಿ, ಆರೋಪಿ ಬಾಲಕರಲ್ಲಿ ಒಬ್ಬನನ್ನು ಉತ್ತರ ಪ್ರದೇಶದ ಅಲಿಘರ ಜಿಲ್ಲೆಯಿಂದ ದಿನಾಂಕ.14/08/2025 ರಂದು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿ, ಇನ್ನೊಬ್ಬ ಬಾಲಕನ ಬಗ್ಗೆ ಮಾಹಿತಿ ನೀಡಿದಾಗಿ ಅವನನ್ನು ಕಾಕತಿ ಗ್ರಾಮದಿಂದ ವಶಕ್ಕೆ ಪಡೆದು ಹೀಗೆ ಇಬ್ಬರನ್ನೂ ವಶಕ್ಕೆ ಪಡೆದುಕೊಂಡು, ಕೊಲೆ ಮಾಡಲು ಬಳಸಿದ 2 ಕಬ್ಬಿಣದ ರಾಡ್ಗಳನ್ನು ವಶಪಡಿಸಿಕೊಂಡು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಕೊಲೆ ಮಾಡಿ ಯಾವುದೇ ಸುಳಿವಿಲ್ಲದಂತೆ ಪರಾರಿಯಾದ ಆರೋಪಿ ಬಾಲಕರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಗಂಗಾಧರ ಬಿ.ಎಮ್, ಎಸಿಪಿ, ಮಾರ್ಗದರ್ಶನದಲ್ಲಿ ಸುರೇಶ ಪಿ. ಶಿಂಗಿ, ಪಿಐ, ಕಾಕತಿ ರವರ ನೇತೃತ್ವದಲ್ಲಿ ಮಂಜುನಾಥ ನಾಯಕ, ಪಿ.ಎಸ್.ಐ (ಕಾ&ಸು), ಮೃತ್ಯುಂಜಯ ಮಠದ, ಪಿ.ಎಸ್.ಐ (ಅಪರಾಧ), ಕೆ. ಡಿ. ನಧಾಪ, ಸಿಬ್ಬಂದಿಯವರಾದ ಟಿ. ಎಮ್. ದೊಡಮನಿ, ವಾಯ್. ಎಚ್. ಕೊಚ್ಚರಗಿ, ನವೀನ್ ಪಾತ್ರೋಟ್, ಎನ್. ಎಮ್. ಚಿಪ್ಪಲಕಟ್ಟಿ, ಕೆಂಪಣ್ಣ ದೊಡಮನಿ, ಧರೆಪ್ಪಾ ಗೇನನ್ನವರ ತಂಡದ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದರು.
ಆದರೆ ಇಷ್ಟೇಲ್ಲಾ ಕಷ್ಟಪಟ್ಟು ಬಿಹಾರ ಹಾಗೂ ಉತ್ತರ ಪ್ರದೇಶಕ್ಕೆ ಹೋಗಿ ಆರೋಪಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆ ಆಗುವಂತೆ ಮಾಡಿದ್ದ ಕಾಕತಿ ಪೊಲೀಸರಿಗೆ ಇನ್ನೋಂದು ಕಷ್ಟ ಎದುರಾಯಿತು. ಅದೇನೆಂದರೆ ಕೊಲೆಯಾದ ಮುಕೇಶ ಕುಮಾರನ ಶವವನ್ನು ಪಡೆಯಲು ಸ್ವತಃ ಪತ್ನಿ ಸೇರಿ ಯಾರು ಮುಂದೆ ಬರಲಿಲ್ಲ. ಏಕೆಂದರೆ ಮುಕೇಶ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿಸಿದಾಗ ಅವನಿಗೆ ಎರಡ್ಮೂರು ದಿನಗಳ ಕಾಲ ನೀಡಿದ ಚಿಕಿತ್ಸೆ ವೆಚ್ಚ ಸುಮಾರು 50 ಸಾವಿರ ರೂಪಾಯಿ ಆಗಿತ್ತು. ಅದಕ್ಕಾಗಿ ಒಂದು ವೇಳೆ ಶವ ಬೇಕಾದರೆ ಆಸ್ಪತ್ರೆ ಬಿಲ್ ಕಟ್ಟಬೇಕಾಗುತ್ತದೆ ಎಂದು ಅವನ ಪತ್ನಿ, ಕುಟುಂಬದವರು ಸೇರಿ ಶವ ಬಿಟ್ಟು ಪರಾರಿಯಾದರು. ಈ ಘಟನೆಯು ಕಾಕತಿ ಪೊಲೀಸರಿಗೆ ಹೊಸ ತಲೆ ನೋವಾಗಿತ್ತು. ಆದರೆ ಮಾನವೀಯತೆಯ ದೃಷ್ಟಿಯಿಂದ ನೋಡಿದ ಪೊಲೀಸರು ಕಾಕತಿ ಪಿಎಸ್ಐ ಮಂಜುನಾಥ ನಾಯಿಕ ಹಾಗೂ ಸಿಬ್ಬಂದಿ ಮತ್ತು ಕೊಲೆಯಾದವ ಕೆಲಸ ಮಾಡುತ್ತಿದ್ದ ಪ್ಯಾಕ್ಟರಿಯ ಮಾಲಿಕ ಸೇರಿಕೊಂಡು ಆಸ್ಪತ್ರೆ ಬಿಲ್ ಕಟ್ಟಿ ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಈ ಶವಸಂಸ್ಕಾರದ ಘಟನೆ ಬಗ್ಗೆ ಮಾಹಿತಿ ಹೊರಗೆ ಬರದಂತೆ ಪೊಲೀಸರು ಹಾಗೂ ಪ್ಯಾಕ್ಟರಿ ಮಾಲಿಕ ನೋಡಿಕೊಂಡರೂ ಇಲ್ಲಿ ಬೇರೆಬೇರೆ ಕಡೆ ಕೆಲಸ ಮಾಡುತ್ತಿರುವ ಬಿಹಾರಿಗಳೇ ಕರ್ನಾಟಕ ಪೊಲೀಸ್ ಹಾಗೂ ಉದ್ಯಮಿಗಳ ಮಾನವೀಯತೆಗೆ ಮನಸೋತು ವಿಷಯ ಬೆಳಕಿಗೆ ಬರುವಂತೆ ಮಾಡಿದ್ದಾರೆ.
ಆಸ್ಪತ್ರೆ ಬಿಲ್ ಕಟ್ಟಬೇಕಾಗುತ್ತದೆ ಎಂದು ಕೊಲೆಯಾದವನ ಶವ ಬಿಟ್ಟು ಹೋದ ಬಿಹಾರಿಗಳು..!
