ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಕೂಟ ಅಧಿಕಾರಕ್ಕೆ ಬರಲಿದೆ ಎಂದು ಜೆವಿಸಿ ಸಮೀಕ್ಷೆ ಹೇಳಿದೆ. ಬಿಹಾರದ ವಿಧಾನಸಭೆಯಲ್ಲಿರುವ 243 ಸ್ಥಾನಗಳ ಪೈಕಿ ಎನ್ಡಿಎಗೆ 120 140 ಸ್ಥಾನಗಳಲ್ಲಿ ಗೆಲುವು ದೊರೆಯಲಿದೆ. ಇನ್ನು ಮಹಾಘಟಬಂಧನಕ್ಕೆ 93 112 ಸ್ಥಾನ ಲಭಿಸಲಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಎನ್ಡಿಎ ಕೂಟದ ಪೈಕಿ ಬಿಜೆಪಿಗೆ ಅತಿಹೆಚ್ಚು ಅಂದರೆ 70 81 ಸ್ಥಾನಗಳು ಲಭಿಸಲಿವೆ ಎಂದು ಸಮೀಕ್ಷೆ ಹೇಳಿದ್ದು, ಜೆಡಿಯುಗೆ 42 48 ಸ್ಥಾನಗಳು ದೊರೆಯಲಿವೆ. ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ಜೆಪಿ(ಆರ್ವಿ) 5 7, ಜಿತನ್ ರಾಮ್ ಮಾಂಜಿ ಅವರ ಎಚ್ಎಎಂಎಸ್ಗೆ 2 ಹಾಗೂ ಆರ್ಎಲ್ಎಂಗೆ 1 2 ಸ್ಥಾನ ಲಭಿಸಲಿದೆ ಎಂದಿದೆ.
ಮಹಾಘಟಬಂಧನದ ಪೈಕಿ ಆರ್ಜೆಡಿಗೆ 69 78 ಸ್ಥಾನಗಳು, ಕಾಂಗ್ರೆಸ್ಗೆ 9 17, ಸಿಪಿಐ(ಎಂಎಲ್)ಗೆ 12 14, ಸಿಪಿಐಗೆ 1, ಸಿಪಿಎಂಗೆ 1 2 ಸ್ಥಾನಗಳು ಲಭಿಸಲಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಹೆಚ್ಚು ಜನಪ್ರಿಯ:
ಮುಖ್ಯಮಂತ್ರಿ ಯಾರಾಗಬೇಕೆಂಬ ಸಮೀಕ್ಷೆಯಲ್ಲಿ ಆರ್ಜೆಡಿಯ ತೇಜಸ್ವಿ ಯಾದವ್ಗೆ ಶೇ.33ರಷ್ಟು ಮಂದಿಯ ಬೆಂಬಲ ದೊರೆತಿದ್ದು ಅಗ್ರ ಸ್ಥಾನದಲ್ಲಿದ್ದಾರೆ. ನಿತೀಶ್ಗೆ ಶೇ.29ರಷ್ಟು ಬೆಂಬಲವಿದ್ದು, 3ನೇ ಸ್ಥಾನದಲ್ಲಿ ಶೇ.10 ಬೆಂಬಲದೊಂದಿಗೆ ಚಿರಾಗ್ ಪಾಸ್ವಾನ್ ಹಾಗೂ ಪ್ರಶಾಂತ್ ಕಿಶೋರ್ ಇದ್ದಾರೆ.


