ಬೆಳಗಾವಿ :
ಬಿಜೆಪಿ ತೊರೆಯುವವರ ಸಂಖ್ಯೆ ಇದೀಗ ಮಹಾಪ್ರವಾಹದಂತೆ ಏರಿಕೆಯಾಗುತ್ತಿದೆ. ಸೊಗಡು ಶಿವಣ್ಣ, ಲಕ್ಷ್ಮಣ ಸವದಿ, ನೆಹರು ಓಲೆಕಾರ, ಎಂ.ಪಿ. ಕುಮಾರಸ್ವಾಮಿ ಸೇರಿದಂತೆ ಅತಿರಥ ಮಹಾರಥರು ಬಿಜೆಪಿ ತೊರೆಯುತ್ತಿದ್ದಾರೆ. ಇದೀಗ ಆ ಸಾಲಿಗೆ ಬೆಳಗಾವಿ ಜಿಲ್ಲೆಯ ರೈತ ನಾಯಕ ಶಶಿಕಾಂತ ನಾಯಕ ಹೊಸ ಸೇರ್ಪಡೆ.
ಬೆಳಗಾವಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನನಗೆ ಸಿಗಬೇಕಾದ ಸ್ಥಾನಮಾನ ಸಿಗುತ್ತಿಲ್ಲ. ಒಂದು ಕಾಲದಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನನಗೆ ಪಕ್ಷ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಾರೆ ಒಂದು ಕಾಲದಲ್ಲಿ ಬಿಜೆಪಿಯನ್ನು ಬೃಹದಾಕಾರವಾಗಿ ಕಟ್ಟಿ ಬೆಳೆಸಿದ ನಾಯಕರು ಒಬ್ಬೊಬ್ಬರೇ ಈಗ ತೊರೆಯುತ್ತಿರುವುದು ಅತ್ಯಂತ ಕಳವಳದ ಸಂಗತಿ.
ಬೆಳಗಾವಿ ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿ ಮಟ್ಟದಲ್ಲಿ ಬೆಳೆಸಿದ್ದ ಬಾಬಾಗೌಡರು ಹಾಗೂ ನಾನು ಆದರೆ ಈ ಬಾರಿ ಹುಕ್ಕೇರಿ ಮತಕ್ಷೇತ್ರದಿಂದ ಟಿಕೆಟ್ ನೀಡದೆ ಇರುವುದರಿಂದ ನಾನು ಕತ್ತಿ ಅವರ ಕುಟುಂಬದ ಕಿರುಕುಳದಿಂದ ಬಿಜೆಪಿ ನೀಡಿರುವ ಜವಾಬ್ದಾರಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಜಿ ಸಚಿವ ಶಶಿಕಾಂತ ನಾಯಕ ಹೇಳಿದರು.
ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಟಿಕೆಟ್ ನೀಡಿದ್ದಾರೆ. ಯಮಕನಮರಡಿಯಲ್ಲಿ ಉಸ್ತುವಾರಿ ಹಾಗೂ ಬೆಳಗಾವಿ ಗ್ರಾಮಾಂತರ ಜಿಲ್ಲಾ ಸ್ಥಾನಕ್ಕೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ಬೆಂಗಳೂರಿಗೆ ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ ಎಂದರು.
ಕಳೆದ 20 ವರ್ಷದಿಂದ ಬಿಜೆಪಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಬಿಜೆಪಿ ಹಳ್ಳಿಯ ಮಟ್ಟದಲ್ಲಿ ಇರದ ಪಕ್ಷವನ್ನು ಬಾಬಾಗೌಡ ಹಾಗೂ ನಾವು ಸೇರಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡಿದ್ದೇವು. ಐದಾರು ಬಾರಿ ಕೆಲಸ ಮಾಡಿದ್ದನ್ನು ನೋಡಿ ಪಕ್ಷ ನನಗೆ ಟಿಕೆಟ್ ನೀಡಿದ್ದರು. ಆಗ ಗೆಲವು ಸಾಧಿಸಿದ್ದೆ. ಅಲ್ಲದೆ ಸಚಿವನಾಗಿಯೂ ಕೂಡ ಕೆಲಸ ಮಾಡಿದ್ದೇನೆ ಎಂದರು.
ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕೆಂದು ಮೊದಲ ಬಾರಿಗೆ ಅಧಿವೇಶ ನಡೆಸಿ ಇಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿ ನಿರಂತರ ಕಾರ್ಯ ಚಟುವಟಿಕೆ ಮಾಡಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡರು.
ಉಮೇಶ ಕತ್ತಿ ಹುಕ್ಕೇರಿ ಮತಕ್ಷೇತ್ರದಿಂದ ಬಿಜೆಪಿಗೆ ಬಂದ ಬಳಿಕ ನನಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರು. ಅದು ಕೇವಲ 11 ತಿಂಗಳು ಮಾತ್ರ ನೀಡಿತ್ತು. ಪಂಚಾಯತ್ ಕೆಲಸ ಹೆಚ್ಚಿಗೆ ಆಗಿದ್ದಂತೆ ಚಿನ್ನದ ಪದಕ ಬಂದಿದ್ದು ನನ್ನ ಅವಧಿಯಲ್ಲಿ ಎಂದ ಅವರು, ಪಕ್ಷ ನೀಡಿದ ಕೆಲಸವನ್ನು ನಾನು ಚಾಚು ತಪ್ಪದೆ ಮಾಡಿದ್ದೇನೆ ಎಂದರು.
ಉಮೇಶ ಕತ್ತಿ ನಿಧನ ಬಳಿಕ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಳಿಯೂ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆ. ಆದರೆ ಈಗಲೂ ನನಗೆ ಅನ್ಯಾಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರ್.ಕೆ.ಪಾಟೀಲ, ಗುಂಡು ಪಾಟೀಲ, ವಿನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.