ಶಿವಸೇನೆಗೆ ಕಾಯ್ದಿರಿಸಲಾಗಿರುವ ಬಿಲ್ಲು ಮತ್ತು ಬಾಣ ದ ಗುರುತನ್ನು ಅಂಧೇರಿ ಪೂರ್ವದ ಉಪಚುನವಣೆಯಲ್ಲಿ ಬಳಸಲು 2ಗುಂಪುಗಳಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಶಿವಸೇನೆಯ ಉಭಯ ಬಣಗಳು ಪಕ್ಷದ ಚಿಹ್ನೆಯಾಗಿರುವ ಬಿಲ್ಲು ಮತ್ತು ಬಾಣದ ಗುರುತನ್ನು ಬಳಸದಂತೆ ಚುನಾವಣಾ ಆಯೋಗ ಸೂಚಿಸಿದೆ.
ಮುಂಬೈ :
ಶಿವಸೇನೆಯ ಉಭಯ ಬಣಗಳಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಡುವಿನ ಬಣಗಳಿಗೆ ಇದೀಗ
ಸಂಕಷ್ಟ ಎದುರಾಗಿದೆ.
ಮಹಾರಾಷ್ಟ್ರದ ಪ್ರಾದೇಶಿಕ ಪಕ್ಷವಾಗಿರುವ ಶಿವಸೇನೆಗೆ ಇದುವರೆಗೆ ಅಧಿಕೃತವಾಗಿ ಚಿಹ್ನೆ ಬಿಲ್ಲು ಮತ್ತು ಬಾಣ ಆಗಿತ್ತು. ಅದನ್ನು ಇದೀಗ ಕೇಂದ್ರ ಚುನಾವಣಾ ಆಯೋಗ ತಡೆ ಹಿಡಿದಿದೆ. ಸೋಮವಾರ ಮಧ್ಯಾಹ್ನ 1ಗಂಟೆ ಒಳಗೆ ಪ್ರತ್ಯೇಕ ಚಿಹ್ನೆ ಆರಿಸಿಕೊಂಡು ಹೊಸ ಅರ್ಜಿ ಸಲ್ಲಿಸುವಂತೆ ಉಭಯ ಬಣಗಳಿಗೆ ಸೂಚಿಸಿದೆ. ಎರಡೂ ಬಣಗಳು ಮೂಲ ಚಿಹ್ನೆಯನ್ನು ತಮಗೇ ನೀಡಬೇಕು ಎಂದು ಕೋರಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದವು. ಇದರಿಂದಾಗಿ ಉಭಯ ಬಣಗಳು ಇದೀಗ ಹೊಸ ಚಿಹ್ನೆ ಆರಿಸಿಕೊಂಡು ಚುನಾವಣಾ ಆಯೋಗದ ಮೊರೆ ಹೋಗುವಂತಾಗಿದೆ.