ಬೆಳಗಾವಿ : ನಾಗರಿಕ ಹಿತ ರಕ್ಷಣಾ ಸಮಿತಿ ಮತ್ತು ಇಸ್ಕಾನ್ ಮಂದಿರಗಳ ವತಿಯಿಂದ ನೆರೆಯ ಬಾಂಗ್ಲಾದೇಶದಲ್ಲಿ ಇಸ್ಕಾನ್ ಮಂದಿರದ ಸ್ವಾಮೀಜಿಯವರನ್ನು ಬಂಧ ಮುಕ್ತಗೊಳಿಸಲು ಒತ್ತಾಯಿಸಿ ಹಿಂದೂ ಜನಾಕ್ರೋಶ ಮೋರ್ಚಾವನ್ನು ಜ.8 ರಂದು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ. ಬಾಂಗ್ಲಾದೇಶದಲ್ಲಿ ಇಸ್ಕಾನ್ ಸ್ವಾಮೀಜಿಯವರನ್ನು ಬಂಧಿಸಿ ಹಲವು ಹಿಂದೂ ದೇಗುಲಗಗಳನ್ನು ಧ್ವಂಸಗೊಳಿಸಲಾಗಿದೆ. ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗುತ್ತಿದೆ. ನಿರಂತರವಾಗಿ ಹಿಂದುಗಳ ಕಗ್ಗೊಲೆ ಖಂಡಿಸಲು ಈ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಬೆಳಗಾವಿಯ ಧರ್ಮವೀರ ಸಂಭಾಜಿ ಮಹಾರಾಜ ಚೌಕದಿಂದ ಬೆಳಿಗ್ಗೆ 9-45 ಕ್ಕೆ ಪ್ರಾರಂಭವಾಗುವ ಮೋರ್ಚಾ, ಕಿರ್ಲೋಸ್ಕರ್ ರಸ್ತೆ, ರಾಮದೇವ ಗಲ್ಲಿ, ಖಡೇ ಬಜಾರ್, ಶನಿವಾರಕೂಟ, ಕಾಕತಿವೇಸ್, ಚನ್ನಮ್ಮ ವೃತ್ತದವರೆಗೂ ಸಾಗಿ ಅಲ್ಲಿ ಬೃಹತ್ ಮಾನವ ಸರಪಳಿ ಹಮ್ಮಿಕೊಳ್ಳಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಆಗಮಿಸುವಂತೆ ಎಂದು ಹಿಂದೂ ಸಂಘಟನೆಗಳ ಮುಖಂಡ ಕೃಷ್ಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.