40 ಜನ ಪಿಕ್ನಿಕ್ ಗೆ ಹೋಗಿದ್ದ ವೇಳೆ ದುರ್ಘಟನೆ ..!
ಜನಜೀವಾಳ ಜಾಲ ಬೆಳಗಾವಿ :40 ಜನ ಗೆಳತಿಯರೆಲ್ಲರೂ ಸೇರಿಕೊಂಡು ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಕಿತವಾಡ ಪಾಲ್ಸ್ ಗೆ ಪಿಕ್ನಿಕ್ ಗೆ ಹೋಗಿದ್ದ ವೇಳೆ ದುರ್ಮರಣಕ್ಕಿಡಾಗಿದ್ದಾರೆ.
ಬೆಳಗಾವಿಯ ಈ ನಾಲ್ವರು ಯುವತಿಯರು ಫಾಲ್ಸ್ ದಡದ ಮೇಲೆ ಪೋಟೋ ತೆಗೆಸಿಕೊಳ್ಳುವಾಗ ಕಾಲುಜಾರಿ ಬಿದ್ದ ಪರಿಣಾಮ ಫಾಲ್ಸ್ ದಲ್ಲಿ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.
ಬೆಳಗಾವಿ ಕಾಲೇಜಿನಲ್ಲಿ ಇವರೆಲ್ಲರೂ ವ್ಯಾಸಂಗ ಮಾಡುತ್ತಿದ್ದಾರೆ.ಉಜ್ವಲ್ ನಗರ ಆಸೀಯಾ ಮುಜಾವರ್(17), ಅನಗೋಳದ ಕುದ್ಶೀಯಾ ಹಾಸ್ಂ ಪಟೇಲ್(20). ಝಟ್ಪಟ್ ಕಾಲೋನಿಯ ರುಕ್ಕಶಾರ್ ಭಿಸ್ತಿ(20), ತಸ್ಮಿಯಾ(20) ಮೃತಪಟ್ಟವರು.
ಬೆಳಗಾವಿ ಕಾಲೇಜಿನಲ್ಲಿ ಇವರೆಲ್ಲರೂ ವ್ಯಾಸಂಗ ಮಾಡುತ್ತಿದ್ದಾರೆ.ಮೃತ ಹಾಗೂ ಗಾಯಾಳುಗಳನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಕುರಿತು ಚಂದಘಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ತನಿಖೆ ಕೈಕೊಂಡಿದ್ದಾರೆ.