ಖಾನಾಪುರ: ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವಿಠ್ಠಲ ಹಲಗೇಕರ ಅವರು ಭೂಮಿ ಪೂಜೆ ನೆರವೇರಿಸಿದರು.
ಭೂರಣಕಿ ಗ್ರಾಮದಲ್ಲಿ ಮಾರಿಯಮ್ಮ ದೇವಿ ದೇವಸ್ಥಾನದ ಶಿಲಾನ್ಯಾಸ ಸಮಾರಂಭದೊಂದಿಗೆ ಪ್ರಾರಂಭವಾಯಿತು.
ಕ್ಷೇತ್ರದ ಪ್ರತಿಯೊಂದು ಹಳ್ಳಿಯನ್ನು ಮುಖ್ಯವಾಹಿನಿಗೆ ಸಂಪರ್ಕಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಉತ್ತಮ ರಸ್ತೆಗಳು, ಶುದ್ಧ ನೀರು ಮತ್ತು ಧಾರ್ಮಿಕ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಾಗರಿಕರ ಜೀವನ ಮಟ್ಟವನ್ನು ಸುಧಾರಿಸಲು ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.
ಮುಂಬರುವ ಲಕ್ಷ್ಮಿ ಜಾತ್ರೆಯ ಹಿನ್ನೆಲೆಯಲ್ಲಿ ಸಿಸಿ ರಸ್ತೆ, ಬೋರ್ವೆಲ್ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಚಿಕ್ಕದಿನಕೊಪ್ಪ ಮತ್ತು ಕರಂಬಳದಲ್ಲಿ ಸಿಸಿ ರಸ್ತೆಗಳು ಮತ್ತು ಮಹಾಲಕ್ಷ್ಮಿ ದೇವಾಲಯದ ಸುತ್ತಲಿನ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಹ ನಡೆಸಲಾಯಿತು.
ಯಡೋಗಾದಿಂದ ಚಾಪಗಾಂವ ರಸ್ತೆ, ತೋಪಿನಕಟ್ಟಿ, ಗಿರಗುಂಜಿವರೆಗಿನ ರಸ್ತೆಗಳ ಅಗಲೀಕರಣ ಹಾಗೂ ಸುಧಾರಣೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಅವರೊಳ್ಳಿ ಮಠದ ಶ್ರೀ ಚನ್ನಬಸವ ದೇವರು, ಬಸವರಾಜ ಸಾಣಿಕೊಪ್ಪ, ಮಲ್ಲಪ್ಪ ಮಾರಿಹಾಳ, ಸುನೀಲ್ ಮದಿಮನಿ, ನಾರಾಯಣ ಹಲಗೇಕರ, ರವಿ ಪಾಟೀಲ, ವಿಠ್ಠಲ ಹಿಂಡಲಗೇಕರ, ಸಿದ್ದು ಪಾಟೀಲ, ಅಮಿತ ಕುಡವೇಕರ,ಯಲ್ಲಪ್ಪ ನಿಲವಡೆ, ಶ್ರೀಕಾಂತ ಇಟಗಿ, ರೈತ ಮೋರ್ಚಾ ಅಧ್ಯಕ್ಷ ಸದಾನಂದ ಪಾಟೀಲ, ರಮೇಶ ಹಂಗರೇಕರ, ಸಂದೀಪ ಅಂಧಾರೆ ಮೊದಲಾದವರು ಉಪಸ್ಥಿತರಿದ್ದರು.


