
ಬೆಳಗಾವಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಹೊನಗಾದಿಂದ ಭೂತರಾಮನಹಟ್ಟಿ ಕಡೆ ಹೋಗುತ್ತಿದ್ದ ವಿಕಲಚೇತನ ವ್ಯಕ್ತಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಭೂತರಾಮನಹಟ್ಟಿಯ ಶಶಿಧರ ಹೊಂಡಾಯಿ(28) ಮೃತಪಟ್ಟಿದ್ದು, ಲಾರಿ ಉತ್ತರ ಪ್ರದೇಶ ಪಾಸಿಂಗ್ ಹೊಂದಿದ್ದು, ಚಾಲಕ ಪರಾರಿಯಾಗಿದ್ದಾನೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಅಪಘಾತಕ್ಕೆ ಬಲಿಯಾದ ಭೂತರಾಮನಹಟ್ಟಿ ವಿಶೇಷಚೇತನ
