ಬೆಳಗಾವಿ :
ಮೂಲತಃ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಯುವ ಪೊಲೀಸ್ ಅಧಿಕಾರಿ ಭರತೇಶ ವೆಂಕಟಾಪುರ ಪೊಲೀಸ್ ಇಲಾಖೆಗೆ ಸೇರಿದ ಕೇವಲ 5 ವರ್ಷಗಳಲ್ಲಿಯೇ ಉತ್ತಮ, ಪ್ರಾಮಾಣಿಕ ಸೇವೆಗಾಗಿ 2022ರ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಗ್ರಾಮೀಣ ಭಾಗದಿಂದ ಬಂದ ಯುವ ಪೊಲೀಸ್ ಅಧಿಕಾರಿ ಪ್ರಸ್ತುತ ಬೆಳಗಾವಿ ಗುಪ್ತಚರ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ಧಾರವಾಡ ವಿವಿಯಿಂದ ಎಂಎಸ್ಸಿ ಪದವೀಧರಾಗಿದ್ದು, ಪದವಿಯನ್ನು ಬಾಗಲಕೋಟೆಯ ಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ಮುಗಿಸಿದ್ದು, ಪಿಯುಸಿ ವಿದ್ಯಾಭ್ಯಾಸವನ್ನು ಬನಹಟ್ಟಿಯಲ್ಲಿ ಮುಗಿಸಿದ್ದಾರೆ. 8-10 ನೇ ತರಗತಿ ತೇರದಾಳ ಹಾಗೂ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವಗ್ರಾಮವಾದ ಹಳಿಂಗಳಿಯಲ್ಲಿ ಮುಗಿಸಿದ್ದಾರೆ. ಇವರ ಈ ಸಾಧನೆಗೆ ಬಂಧು ಬಳಗದವರು, ಗ್ರಾಮದವರು, ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.