ಮೂಡಲಗಿ:
ಸಾರ್ವಜನಿಕರ ಅಭಿವೃದ್ಧಿಗೆ ನೂರಾರು ಯೋಜನೆಗಳನ್ನು ರೂಪಿಸುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಯ ಲಾಭ ತಲುಪಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ದೇಶದ ಪ್ರತಿ ಮನೆಯಲ್ಲೂ ಮೋದಿ ಸರ್ಕಾರದ ಯೋಜನೆಯ ಲಾಭ ಪಡೆದ ಫಲಾನುಭವಿಗಳು ಸಿಗುತ್ತಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸೋಮವಾರ ಜ-08 ರಂದು ಆಂಧ್ರ ಪ್ರದೇಶದ ನಂದ್ಯಾಲ್ ಲೋಕಸಭಾ ಕ್ಷೇತ್ರದ ಪಗಡಿಯಾಲ ಮಂಡಲದಲ್ಲಿ ಆಯೋಜಿಸಿದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಫಲಾನುಭವಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮವನ್ನು ವೀಕ್ಷಿಸಿ, ಮಾತನಾಡಿದ ಅವರು ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಉತ್ತಮ ಯೋಜನೆಗಳ ಪರಿಣಾಮ ನಮ್ಮ ದೇಶ ಅಭಿವೃದ್ಧಿಯ ಹಾದಿಯಲ್ಲಿ ಮಹೋನ್ನತ ಸಾಧನೆ ಮಾಡುತ್ತಿದ್ದು, ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆಯುತ್ತಿದೆ. ಜನೋಪಯೋಗಿ ಯೋಜನೆಗಳು ದೇಶದ ಮೂಲೆ ಮೂಲೆಗೂ ತಲುಪಿಸಿ ಯಶಸ್ವಿಯಾಗಿಸಲು ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಕೈಗೊಳ್ಳಲಾಗಿದೆ.
ಈ ಅಭಿಯಾನದ ಜನಜಾಗೃತಿಗಾಗಿ ಸಂಚರಿಸುತ್ತಿರುವ ವಿಡಿಯೋ ವಾಹನಕ್ಕೆ ದೇಶವಾಸಿಗಳು ಪ್ರೀತಿಯಿಂದ ‘ಮೋದಿ ಗ್ಯಾರಂಟಿ ಗಾಡಿ’ ಎಂಬ ಹೆಸರಿಟ್ಟಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಜನರಿಗೆ ನೇರವಾಗಿ ತಲುಪಿಸಲು ವಿಕಸಿತ ಭಾರತ ಸಂಕಲ್ಪ ಯಾತ್ರೆಯಾಗಿದೆ. ಇದುವರೆಗೆ 10 ಕೋಟಿ ಜನ ಭಾಗವಹಿಸುವ ಮೂಲಕ ಯಾತ್ರೆಯು ದೇಶದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಒ ಸೈಯ್ಯದ ಕಾಜಾ ಮೊಯಿದಿನ್ ಅವರು ಕೇಂದ್ರ ಸರ್ಕಾರದ ನಬಾರ್ಡ್ ಯೋಜನೆಯ ಮೂಲಕ ಸುಮಾರು ಐದು ಗ್ರಾಮಗಳಲ್ಲಿ ಗೋಡಾವನ್ ನಿರ್ಮಾಣ ಮಾಡಿ ಅದು ರೈತರಿಗೆ ಯಾವ ರೀತಿ ಲಾಭವಾಗಿದೆ ಎಂದು ಪ್ರಧಾನಿ ಮೋದಿ ಅವರಿಗೆ ಈ ವಚ್ಯುವಲ್ ಸಭೆಯ ಮೂಲಕ ವಿವರ ನೀಡಿದರು ಮತ್ತು ಪ್ರಧಾನಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನಸಂಖ್ಯೆ ಮತ್ತು ಅದರಲ್ಲೂ ವಿಶೇಷವಾಗಿ ಮಹಿಳೆಯರು ಭಾಗವಹಿಸಿದ ಕಂಡು ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಮಂಜೀರ್ ಜೀಲಾನಿ ಸಮೂನ್, ಅಪರ ಜಿಲ್ಲಾಧಿಕಾರಿ ಟಿ.ರಾಹುಲ್ ಕುಮಾರ್ ರೆಡ್ಡಿ, ನಂದ್ಯಾಲ್ ಬಿಜೆಪಿ ಜಿಲ್ಲಾಧ್ಯಕ್ಷೆ ಡಾ. ಬೈರೆಡ್ಡಿ ಶಬರಿ ರೆಡ್ಡಿ, ವಿಕಸಿತ ಭಾರತ ಸಂಕಲ್ಪ ಯಾತ್ರೆ ಜಿಲ್ಲಾ ಉಸ್ತುವಾರಿ ಡಾ. ಇಂಟಿ ಆದಿನಾರಾಯಣ ರೆಡ್ಡಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷೆ ವಿಜಯ ಮನೋಹರಿ, ಜಿಲ್ಲಾ ಕೃಷಿ ಸಲಹಾ ಮಂಡಳಿ ಅಧ್ಯಕ್ಷ ವಂಗಲ ಭರತ್ ಕುಮಾರ್ ರೆಡ್ಡಿ, ಕೇಂದ್ರ ಗ್ರಾಮೀಣಾಭಿವೃದ್ದಿ ಇಲಾಖೆಯ ಉಪಕಾರ್ಯದರ್ಶಿ ಲಲಿತ್ ಕುಮಾರ್, ಎಂ ಮಲ್ಲೇಶ್ವರಿ, ಪಿ ದಿವ್ಯಾ, ಸೇರಿದಂತೆ ಸ್ಥಳಿಯ ಮುಖಂಡರು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.