ಬೆಳಗಾವಿ : ಇದೇನು ಜಿಲ್ಲಾ ಪಂಚಾಯ್ತಿಯೋ, ಜ್ಯೋತಿಷ್ಯ ಕೇಂದ್ರವೋ ಇಲ್ಲವೇ ಮಾಜಿ ಸೈನಿಕರ ಒಕ್ಕೂಟವೋ ?
ಬೆಳಗಾವಿ ಜಿಲ್ಲಾ ಪಂಚಾಯಿತಿಗೆ ಹೊಂದಿಕೊಂಡಿರುವ ಇಂದಿರಾ ಕಾಲೋನಿಗೆ ಹೋಗುವ ರಸ್ತೆಯಲ್ಲಿ ಹಾಕಲಾಗಿರುವ ನಾಮಫಲಕಗಳು ಇವು.
ಈ ರಸ್ತೆ ಬೆಳಗಾವಿಯಲ್ಲಿ ಅತ್ಯಂತ ಜನನಿಬಿಡ. ಯಾಕೆಂದರೆ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ, ಕೋರ್ಟುಗಳು ಸೇರಿದಂತೆ ಎಲ್ಲಾ ಸರಕಾರಿ ಕಚೇರಿಗಳು ಈ ಸ್ಥಳದಲ್ಲೇ ಇವೆ. ಹೀಗಾಗಿ ಈ ರಸ್ತೆ ಅತ್ಯಂತ ಪ್ರಮುಖವಾಗಿದೆ. ಆದರೆ, ಈ ರಸ್ತೆಯಲ್ಲೀಗ ಪ್ರಖ್ಯಾತ ಜ್ಯೋತಿಷ್ಯ ಹೇಳಲಾಗುತ್ತದೆ ಎಂದು ನಾಮಫಲಕ ಹಾಕಿರುವುದು ಜನತೆಗೆ ತೀವ್ರ ತೊಂದರೆಯನ್ನು ಉಂಟು ಮಾಡುತ್ತಿದೆ. ರಸ್ತೆಯ ಮೇಲೆ ರಾಜಾರೋಷವಾಗಿ ನಾಮಫಲಕವನ್ನು ನೆಟ್ಟಿರುವುದು ಸವಾರರಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಈ ರಸ್ತೆ ಮೂಲಕ ಹಾದು ಹೋಗುವ ವಾಹನ ಸವಾರರು ಪ್ರತಿದಿನ ಹಿಡಿಶಾಪ ಹಾಕಿಯೇ ಹಾಕಿ ಮುಂದೆ ಸಾಗುವುದು ಇಲ್ಲಿ ಸರ್ವೇಸಾಮಾನ್ಯವಾಗಿದೆ.
ಇನ್ನು ಹತ್ತು ದಿನಗಳಲ್ಲಿ ಬೆಳಗಾವಿಯಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ ಬೆಳಗಾವಿ ಮಹಾನಗರವನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಇಂತಹ ನಾಮಫಲಕವನ್ನು ತಕ್ಷಣ ತೆರವುಗೊಳಿಸಬೇಕು. ಈ ಮೂಲಕ ಬೆಳಗಾವಿ ನಗರವನ್ನು ಇನ್ನಷ್ಟು ಸುಂದರಗೊಳಿಸಬೇಕಾಗಿದೆ.
ಈ ರಸ್ತೆಗೆ ಹೊಂದಿಕೊಂಡಂತೆ ಜಿಲ್ಲಾ ಪಂಚಾಯಿತಿ ಇದೆ. ಇದನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಮುಂದಾಗಬೇಕಾಗಿದೆ ಎನ್ನುವುದು ಬೆಳಗಾವಿ ಜನತೆಯ ಒತ್ತಾಯವಾಗಿದೆ.