ಬೆಳಗಾವಿ : 2023-24 ನೇ ವರ್ಷದಲ್ಲಿ ಬೆಳಗಾವಿ ಶ್ರೀ.ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್.. ಬೆಳಗಾವಿಯು ಉತ್ತಮ ಬ್ಯಾಂಕಿಂಗ್ ವ್ಯವಹಾರಗಳನ್ನು ನಿರ್ವಹಿಸಿ, ಗ್ರಾಹಕರ ವಿಶ್ವಾಸ ಹಾಗೂ ಮೆಚ್ಚುಗೆ ಗಳಿಸಿಕೊಂಡಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ದುಡಿಯುವ ಬಂಡವಾಳವು ರೂ.179.14 ಕೋಟಿ, ಠೇವುಗಳು ರೂ.152.30 ಕೋಟಿ ಹಾಗೂ ಸಾಲ ಬಾಕಿ ರೂ.106.32 ಕೋಟಿ ಯಷ್ಟಾಗಿದ್ದು, ರೂ.1.51 ಕೋಟಿ ಲಾಭ ಗಳಿಸಿದೆ.
ಉತ್ತಮ ಥಕಬಾಕಿ ಸಾಲ ವಸೂಲಾತಿಯಿಂದಾಗಿ ಬ್ಯಾಂಕಿನ ಥಕಬಾಕಿ ಪ್ರತಿಶತವು ಶೇ.3.3 ಇದ್ದು, ಸಾಲ ಬಾಕಿಗೆ ನಿವ್ವಳ ಎನ್ಪಿಎ ಪ್ರಮಾಣವು ಶೇ. 0.00 ಪ್ರತಿಶತವಾಗಿದೆ. ಬ್ಯಾಂಕು ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಕಂಡಿದ್ದು, ಆಡಳಿತ ಮಂಡಳಿಯು ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡುವುದರೊಂದಿಗೆ, ಕಾಲ ಕಾಲಕ್ಕೆ ಸಭೆ ಸೇರಿ ಉತ್ತಮ ನಿರ್ಣಯಗಳನ್ನು ಕೈಗೊಂಡು ಸಂಸ್ಥೆಯನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಿಕೊಂಡು ಬಂದಿದೆ.
ಆಡಳಿತ ಮಂಡಳಿಯಲ್ಲಿ ಬಸವರಾಜ ವಿ. ಉಪ್ಪಿನ ಅಧ್ಯಕ್ಷರಾಗಿ, ಗಿರೀಶ ವಿ. ಬಾಗಿ ಉಪಾಧ್ಯಕ್ಷರಾಗಿ ಹಾಗೂ ಬಾಳಪ್ಪ ಬಿ. ಕಗ್ಗಣಗಿ, ವಿಜಯಕುಮಾರ ಸಿ.ಅಂಗಡಿ, ರಮೇಶ ಎಮ್.ಕಳಸಣ್ಣವರ, ಪ್ರಕಾಶ ಎಮ್.ಬಾಳೇಕುಂದ್ರಿ, ರಮೇಶ ಎಸ್. ಸಿದ್ದಣ್ಣವರ, ಬಸವರಾಜ ವಿ. ಗೊಂಡ, ಸರಳಾ ಎಸ್. ಹೇರೆಕರ, ಗಿರೀಶ ಎಸ್. ಕತ್ತಿಶೆಟ್ಟಿ, ದೀಪಾ ಎಮ್. ಕುಡಚಿ, ಸಚಿನ ಆರ್. ಶಿವಣ್ಣವರ, ಸತೀಶ ಕೆ. ಪಾಟೀಲ ಹಾಗೂ ಚಂದ್ರಕಾಂತ ಎಚ್.ಕಟ್ಟಿಮನಿ ಇವರು ನಿರ್ದೇಶಕರಾಗಿದ್ದು, ಮಹಾದೇವ ಎಮ್. ಅಥಣಿ, ಹಾಗೂ ಚಂದ್ರಶೇಖರ ಎ. ಹಿರೇಮಠ ಇವರು ತಜ್ಞ ನಿರ್ದೇಶಕರಾಗಿರುತ್ತಾರೆ.
ಅದರಂತೆ ನಿರ್ವಹಣಾ ಮಂಡಲಿ(ಬಿಓಎಮ್)ಅಧ್ಯಕ್ಷರಾಗಿ ಬಾಳಪ್ಪ ಬಿ. ಕಗ್ಗಣಗಿ, ವಿಜಯಕುಮಾರ ಸಿ. ಅಂಗಡಿ, ರಾಜಶೇಖರ ಎಸ್. ಚೊಣ್ಣದ, ಸೋಮಶೇಖರ ಬಿ. ಹೊಂಬಳ, ಮಹೇಶ ಎಮ್. ಉಡದಾರ ಇವರು ಸದಸ್ಯರಾಗಿದ್ದು ಸಂಸ್ಥೆಯಲ್ಲಿ ಗೌರವ ಸೇವೆ ಸಲ್ಲಿಸುತ್ತಿರುವರು. ಶಂಕರ ಎಸ್. ವಾಲಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾಗಿದ್ದು, ಬಸವರಾಜ ಜಿ. ನ್ಯಾಮಗೌಡ ಇವರು ಉಪ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.