ಬೆಳಗಾವಿ : ಶಿವಗಿರಿ ಕೋ ಅಪ್ ಕ್ರೆಡಿಟ್ ಸೊಸೈಟಿಯ 25 ನೇ ವಾರ್ಷಿಕ ಮಹಾಸಭೆ ರವಿವಾರ (ದಿನಾಂಕ 22/9/2024 ರಂದು) ನಗರದ ಮಹಾದ್ವಾರ ರಸ್ತೆಯ ಸೊಸೈಟಿಯ ಕಾರ್ಯಾಲಯದಲ್ಲಿ ನಡೆಯಿತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಸೊಸೈಟಿ ಅಧ್ಯಕ್ಷ ಸುಜನ್ ಕುಮಾರ್ ಅವರು, ಸಂಸ್ಥೆ ನಡೆದು ಬಂದ ದಾರಿ ಹಾಗೂ ಮುಂದೆ ಸಂಸ್ಥೆಯ ಗುರಿಯನ್ನು ತಲುಪಲು ಎಲ್ಲರೂ ಇನ್ನು ಹೆಚ್ಚಿನ ಪರಿಶ್ರಮದೊಂದಿಗೆ ಶ್ರಮಿಸಿ, ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸೋಣ ಎಂದು ಸಲಹೆ ನೀಡಿದರು.
ನಿರ್ದೇಶಕ ಸುಧೀರ್ ಕುಮಾರ್ ಸಾಲಿಯಾನ್ ಮಾತನಾಡಿ, ಸಹಕಾರ ತತ್ವದಂತೆ ಸಂಸ್ಥೆ ಗ್ರಾಹಕರಿಗೆ ಉತ್ತಮ
ಸೇವೆಯ ಜೊತೆಗೆ ಅನೇಕ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಜಯಂತ ಕೆ. ಪೂಜಾರಿ ಹಾಗೂ ಉಪಾಧ್ಯಕ್ಷ ಸುನಿಲ್ ಆರ್. ಪೂಜಾರಿ ಮಾತನಾಡಿ, ಸಂಸ್ಥೆಯು ಸದಸ್ಯರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಎಲ್ಲರೂ ಸೇರಿ ಬೆಳೆಸೋಣ ಎಂದರು.
ಸಂಸ್ಥೆಯ ಮುಖ್ಯ ಕಾರ್ಯ
ನಿರ್ವಾಹಕ ಸೋಮನಾಥ ಕಡಕೋಳ ಅವರು 2023-24 ನೇ ಸಾಲಿನ ಲೆಕ್ಕಪತ್ರ ಹಾಗೂ ವಾರ್ಷಿಕ ವರದಿಯನ್ನು ಮಂಡಿಸಿದರು. ನಂತರ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಸ್ವಸಹಾಯ ಗುಂಪಿನ ಸದಸ್ಯರು, ಪ್ರಸಕ್ತ ವರ್ಷದ ಉತ್ತಮ ಸ್ವ ಸಹಾಯ ಗುಂಪನ್ನು ಗುರುತಿಸಿ ಗೌರವಿಸಲಾಯಿತು.
ನಿರ್ದೇಶಕರಾದ ಸುಂದರ ಕೋಟ್ಯಾನ್, ಕೃಷ್ಣ ಎಸ್. ಪೂಜಾರಿ, ಮಾಧವ ಕೋಟ್ಯಾನ್, ಸುರೇಶ ಕೆ.
ಜತ್ತನ್ , ಬಾಳಪ್ಪ ಕಾಳೆನಟ್ಟಿ,
ರಮೇಶ್ ಬಸನಾಯಕ ಮತ್ತು ಬೇಬಿ ಆರ್. ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿಬ್ಬಂದಿವರ್ಗ ಹಾಗೂ ಪಿಗ್ಮಿ ಸಂಗ್ರಹಕಾರರು ಹಾಜರಿದ್ದರು. ಸನ್ನಿಧಿ ಶೆಟ್ಟಿ ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕ ಚಂದ್ರ ಎಚ್.ಪೂಜಾರಿ ನಿರೂಪಿಸಿ ವಂದಿಸಿದರು.