ಬೆಳಗಾವಿ :
ನಗರದ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಎನ್.ಸಿ.ಸಿ. ವತಿಯಿಂದ ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಗೌರವವಂದನೆ ಸಲ್ಲಿಸಲು ಕಾರ್ಗಿಲ್ ವಿಜಯ ದಿನವನ್ನು ಗುರುವಾರ ಕಾಲೇಜಿನ ಸರ್. ಸಿ.ವಿ. ರಾಮನ್ ಸಭಾಂಗಣದಲ್ಲಿ ಆಚರಿಸಲಾಯಿತು.
ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎಸ್.ಡಿ. ಗೋರಿನಾಯಕ ಅವರು ಭಾಗವಹಿಸಿ ಕಾರ್ಗಿಲ್ ಯುದ್ಧದಲ್ಲಿ ಯೋಧರ ಸಾಹಸವನ್ನು ಕುರಿತು ವಿವರಿಸಿದರು.
ಭಾರತೀಯ ಸೈನ್ಯದ ಸಾಧನೆಗಳ ಕುರಿತು ವಿಡಿಯೋ ಬಿತ್ತರಿಸಲಾಯಿತು. ಎನ್ಸಿಸಿ ಗೀತೆಯನ್ನು ಹಾಡಲಾಯಿತು.
ಪ್ರಾಚಾರ್ಯೆ ಡಾ. ಜ್ಯೋತಿ ಎಸ್. ಕವಳೇಕರ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕೆಡೆಟ್. ಸ್ನೇಹಾ ಟಿ. ಸ್ವಾಗತಿಸಿದರು. ಕೆಡೆಟ್ ಪ್ರವೀಣ ವಂದಿಸಿದರು. ಎಲ್/ಸಿಪಿಎಲ್ ನಿವೇದಿತಾ ನಿರೂಪಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.