ಬೆಳಗಾವಿ : ಬೆಳಗಾವಿ ಸದಾಶಿವನಗರದಲ್ಲಿ ಮಂಗಳವಾರ ನಡುರಾತ್ರಿ ಮಹಿಳೆಯನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿದ ಪ್ರಕರಣದ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶ್ರೀನಗರದ ಸಂತೋಷ್ ಜಾಧವ್ (38) ಎಂಬ ಆಟೋ ಡ್ರೈವರ್ ವಡ್ಡರವಾಡಿ ರಾಮನಗರದ ಮಹಾದೇವಿ ಕರೆನ್ನವರ( 42)ಎಂಬ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿದ್ದ. ಈತ ಆ ಮಹಿಳೆಯಿಂದ 10 ಸಾವಿರ ರೂಪಾಯಿ ಪಡೆದುಕೊಂಡಿದ್ದ. ಆ ಸಂಬಂಧ ಇಬ್ಬರ ನಡುವೆ ಜಗಳ ನಡೆದು ಕೊನೆಗೆ ಸಂತೋಷ್ ಮಹಿಳೆಯನ್ನು ಭೀಕರವಾಗಿ ಹೊಡೆದು ಸಾಯಿಸಿದ್ದ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಗುಲಾಬ್ ರಾವ್ ಬೊರಸೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ನಾರಾಯಣ ಬರಮನಿ ಇದ್ದರು.
ಮಹಾದೇವಿ ಕೊಲೆ ಪ್ರಕರಣ; ಐದು ಗಂಟೆಯಲ್ಲೇ ಆರೋಪಿಯ ಹೆಡೆಮುರಿ ಕಟ್ಟಿದ ಬೆಳಗಾವಿ ಪೊಲೀಸರು
