ಬೆಳಗಾವಿ : ಬೆಳಗಾವಿ ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಅಕ್ರಮವಾಗಿ ಮಾದಕ ವಸ್ತು ಸಾಗಟ ಮತ್ತು ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ಎನ್ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. 36 ಪ್ರಕರಣಗಳಲ್ಲಿ 103 ಕೆಜಿ, 809 ಗ್ರಾಂ ಮತ್ತು 18 ಮಿಲಿ ಗ್ರಾಂ ಸೇರಿ ಒಟ್ಟು 36,48,990 ಮಾಡಿಕೊಳ್ಳಲಾಗಿತ್ತು. ಇವುಗಳನ್ನು ಪೊಲೀಸ್ ಆಯುಕ್ತರು, ಪೊಲೀಸ್ ಅಧಿಕಾರಿಗಳು, ಪರಿಸರ ಅಧಿಕಾರಿಗಳು, ವಾಯುಮಾಲಿನ್ಯ ನಿಯಂತ್ರಣ ಇಲಾಖೆ, ಉಪ ಔಷಧಿ ನಿಯಂತ್ರಕರು ಇವರ ಸಮ್ಮುಖದಲ್ಲಿ ದಿ ಬೆಳಗಾಂ ಗ್ರೀನ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ನಲ್ಲಿ ವೈಜ್ಞಾನಿಕ ಮತ್ತು ನಿಯಮಾನಸಾರ ನಾಶಪಡಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾದಕ ವಸ್ತುಗಳ ನಾಶಪಡಿಸಿದ ಬೆಳಗಾವಿ ಪೊಲೀಸರು
