ಬೆಳಗಾವಿಯಲ್ಲಿ ಬಹುದೊಡ್ಡ ಗಾಂಜಾ ಜಾಲವನ್ನು ಭೇದಿಸಿದ ಪೊಲೀಸರು..!
5 ಕೆಜಿ ಬೆನ್ನಟ್ಟಿ 50 ಕೆಜಿ ತಲುಪಿದ ಗಾಂಜಾ ತನಿಖೆ..!
ಪಿಐ ಗಡ್ಡೆಕರ ತಂಡದಿಂದ ಅತಿದೊಡ್ಡ ಕಾರ್ಯಾಚರಣೆ, ಅರ್ಧ ಕ್ವಿಂಟಾಲ್ ಗೂ ಅಧಿಕ ಗಾಂಜಾ ವಶ.
ಗಾಂಜಾ ಮುಕ್ತ ಬೆಳಗಾವಿ ಕನಸಿನತ್ತ ಕಮಿಷನರ್, ಡಿಸಿಪಿ ಕಣ್ಣು..!

ಬೆಳಗಾವಿ : ನಿನ್ನೆ ಬೆಳಗಾವಿ CEN ಪೊಲೀಸ ಠಾಣೆಯ ಪೊಲೀಸರು ಬೆಳಗಾವಿಯಿಂದ ಮಹಾರಾಷ್ಟ್ರದ ಶಿನೋಳಿ ಸಂಪರ್ಕದ ರಸ್ತೆಯಲ್ಲಿರುವ ಸುಳಗಾ ಗ್ರಾಮದ ಬಳಿಯಿರುವ Sameplace ಹೆಸರಿನ ದಾಭಾ ಬಳಿ ಕಾರ ಚೆಕ್ ಮಾಡಿದಾಗ ಆರು ಜನ ಆರೋಪಿಗಳು ಸುಮಾರು ಅರ್ಧ ಕ್ವಿಂಟಾಲ್ ನಷ್ಟು ಗಾಂಜಾದೊಂದಿಗೆ ಸಿಕ್ಕಿ ಬಿದ್ದಿದ್ದಾರೆ.
ಮಹಾರಾಷ್ಟ್ರ ಕಡೆಯಿಂದ ಬೆಳಗಾವಿಗೆ ಎರಡು ಕಾರಿನಲ್ಲಿ ಬರುತ್ತಿದ್ದ ಗಾಂಜಾ ಧಂಧೆಯ ಪ್ರಮುಖ ಕಿಲಾಡಿಗಳಾದ
ಇಸ್ಮಾಯಿಲ್ ಹಾಗೂ ತಾಜೀರ್ ಇಬ್ಬರನ್ನು ತಡೆದು ಪರಿಶೀಲನೆ ನಡೆಸಿದಾಗ ಅತಿದೊಡ್ಡ ಗಾಂಜಾ ಜಾಲ ಬಯಲಿಗೆ ಬಂದಿದೆ.
ಇವರೊಂದಿಗೆ
ಕೊಲ್ಹಾಪುರದ ಪ್ರಥಮೇಶ,
ಹುಕ್ಕೇರಿ ತಾಲೂಕಿನ ತೇಜಸ ವಜಾರೆ,
ಕೊಲ್ಹಾಪುರದ ಶಿವಕುಮಾರ ಅಸಾಬೆ,
ಸಾತಾರಾದ ರಂಜಾನ್ ಜಮಾದಾರ ಸೇರಿ ಒಟ್ಟು ಆರು ಜನ ಆರೋಪಿಗಳು ಸೇರಿಕೊಂಡು ಸಾಗಿಸುತ್ತಿದ್ದ ಸುಮಾರು 42.73 kg ಗಾಂಜಾದೊಂದಿದೆ ಸಿಕ್ಕಿ ಬಿದ್ದಿದ್ದಾರೆ. ಅದಲ್ಲದೇ ಇವರ ಬಳಿಯಿದ್ದ 10 ಮೊಬೈಲ್ ಗಳು, ಒಂದು ಮಚ್ಚು, ಒಂದು ತೂಕದ ಮಷಿನ್, 4000/- ರೂ ನಗದು ವಶಕ್ಕೆ ಪಡೆದು ಕೃತ್ಯಕ್ಕೆ ಬಳಿಸಿದ ಎರಡು ಸ್ವೀಪ್ಟ್ ಕಾರು ಹಾಗೂ ಒಂದು ಮಾರುತಿ ವ್ಯಾಗನಾರ ಕಾರನ್ನು ಪೊಲೀಸರು ಜಪ್ತ ಮಾಡಿ ತನಿಖೆ ಕೈಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಭಂದಿಸಿದಂತೆ ಒಟ್ಟು 50ಕ್ಕೂ ಹೆಚ್ಚು ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿರುದಾಗಿ ಕಮೀಷನರ್ ತಿಳಿಸಿದರು.
ಮೊದಲ ಬಾರಿಗೆ ಗಾಂಜಾ ಮಾರಾಟ ಜಾಲದ ಪ್ರಮುಖ ಆರೋಪಿ ಹಾಗೂ ದಲ್ಲಾಳಿ ಇಸ್ಮಾಯಿಲ್ ಅಲಿಯಾಸ್ ಸದ್ದಾಮ್ ನನ್ನು ಪೊಲೀಸರು ಬಂಧಿಸಿದ್ದು, ಈತ ಮಧ್ಯಪ್ರದೇಶ ಹಾಗೂ ಓಡಿಸ್ಸಾದಿಂದ ಗಾಂಜಾ ತಂದು ಮಾರುತ್ತಿದ್ದ, ಹಾಗೂ ಪುಣೆ ಮತ್ತು ಮುಂಬೈನಿಂದ ಹೆರಾಯಿನ ಪೂರೈಕೆ ಮಾಡುತ್ತಿರುವುದಾಗಿ ತಿಳಿದಿದೆ.
ಈ ಗಾಂಜಾ ದಾಳಿಯು ಇಲ್ಲಿಯವರೆಗೆ ನಡೆದಿರುವ ಅತಿ ದೊಡ್ಡ ಪ್ರಕರಣಗಳಲ್ಲಿ ಒಂದಾಗಿದೆ.
CEN ಇನ್ಸ್ಪೆಕ್ಟರ್ ಬಿ ಆರ್ ಗಡ್ಡೆಕರ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ಸುಮಾರು ದಿನಗಳಿಂದ ಬೆನ್ನಟ್ಟಿ ನಡೆಸಲಾಗಿದೆ. ಈ ಪ್ರಕರಣ ಭೇದಿಸುದಕ್ಕಾಗಿ ಪಿಐ ಗಡ್ಡೆಕರ ಮುಂಬೈ ಹಾಗೂ ಇತರೆ ನಗರಗಳನ್ನು ಸುತ್ತಾಡಿ ಖಚಿತ ಮಾಹಿತಿ ಪಡೆದು ದಾಳಿಯ ರೂಪರೇಷೆಯನ್ನು ರಚಿಸಿ ಕೊನೆಗೆ ಒಂದು ದೊಡ್ಡ ಸಮಾಜ ಘಾತುಕ ಕೃತ್ಯವನ್ನು ಸೆದೆಬಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ತಂಡದ ಕಾರ್ಯಕ್ಕೆ ಕಮೀಷನರ್ ಭೂಷಣ ಗುಲಬರಾವ ಬೋರಸೆ, ಡಿಸಿಪಿ ನಾರಾಯಣ ಬರಮಣಿ, ನಿರಂಜನ ಅರಸ್ ಸೇರಿ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
5ಕೆಜಿ ಯಿಂದ 50 ಕೆಜಿ ತಲುಪಿದ ತನಿಖೆ..!
ಜೂನ್ 29 2025 ತಾಜಿಬ್ ಹಾಗೂ ಅನುರಾಗ 5 kg ಗಾಂಜಾದೊಂದಿದೆ ಸಿಕ್ಕಿಬಿದ್ದ ಕೇಸ್ ತನಿಖೆಯಲ್ಲಿ ಇಸ್ಮಾಯಿಲ್ ಸದ್ದಾಂ ಬಾಬು ಸಯ್ಯದ ಆತನ ಹೆಸರು ಬಂದಮೇಲೆ ಜುಲೈ 21 ರಂದು ಮುಂಬೈಗೆ ಹೋಗಿ ಅವನ ಮನೆ ಮೇಲೆ ದಾಳಿ ಮಾಡಿದಾಗ 2 kg ಗಾಂಜಾದೊಂದಿದೆ ಮತ್ತೊಬ್ಬ ಆರೋಪಿ ಹಾಗೂ ಇತನ ಮಾವನಾದ ಅಬ್ದುಲ್ ಮಾಜೀದ್ ನನ್ನು ಬಂಧಿಸಿ ಹಿಂಡಲಗಾ ಜೈಲಿಗಟ್ಟಲಾಗಿತ್ತು.
ಈ ಪ್ರಕರಣವನ್ನು ಬೆನ್ನಟ್ಟಿ ತನಿಖೆ ಕೈಕೊಂಡದಾಗ ಅತಿ ದೊಡ್ಡ ಗಾಂಜಾ ಜಾಲವನ್ನು ಭೇದಿಸುವಲ್ಲಿ ಬೆಳಗಾವಿ ಪೊಲೀಸರು ಸಫಲರಾಗಿದ್ದಾರೆ.