ಬೆಳಗಾವಿ: ಕ್ಯಾಂಪ್ ಪೊಲೀಸ್ ಠಾಣೆಯ ಪೊಲೀಸರು ಮನೆ ಕಳ್ಳರನ್ನು ಬಂಧಿಸಿ 85 ಲಕ್ಷ ಮೌಲ್ಯದ ಬಂಗಾರ ಆಭರಣಗಳು ವಶಕ್ಕೆ ಪಡೆದಿದ್ದಾರೆ.
ಶ್ರಮೇಶ ಸುರೇಶ ರೇಡೆಕರ ಎಂಬುವರು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ತಮ್ಮ ಮನೆಯಲ್ಲಿ ಒಟ್ಟು 981.1 ಗ್ರಾಂ ತೂಕದ ಬಂಗಾರದ ಆಭರಣಗಳು ಕಳ್ಳತನವಾದ ಬಗ್ಗೆ ದೂರು ಕೊಟ್ಟಿದ್ದರು. ದೂರು ದಾಖಲಿಸಿದ ತನಿಖೆ ಮಾಡಿ, ಈ ಪ್ರಕರಣದಲ್ಲಿ ಅಣ್ಣಾಪೂರ್ಣಾ ಜ್ಯೋತಿಬಾ ಬೆಳಗುಂದಕರ ಹಾಗೂ ಜ್ಯೋತಿಬಾ ಗುಂಡು ಬೆಳಗುಂದಕರ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದೂರು ನೀಡದ ವ್ಯಕ್ಯಿಯ ಮನೆಯಲ್ಲಿ ಕಳ್ಳತನ ಮಾಡಿದ್ದ ಒಟ್ಟು 981.1 ಗ್ರಾಂ ತೂಕದ ಬಂಗಾರದ ಆಭರಣಗಳಲ್ಲಿ ಒಟ್ಟು 877.4 ಗ್ರಾಂ ತೂಕದ ಬಂಗಾರ ಆಭರಣಗಳನ್ನು ಯಥಾವತ್ತಾಗಿ ವಶಪಡಿಸಿಕೊಂಡಿದ್ದು ಇರುತ್ತದೆ.ಅವುಗಳ ಒಟ್ಟು ಮೌಲ್ಯ 85 ಲಕ್ಷ ರೂಪಾಯಿ ಇರುತ್ತದೆ.
ಈ ತಂಡದಲ್ಲಿ ಕಾರ್ಯನಿರ್ವಹಿಸಿದ ಇನ್ಸ್ಪೆಕ್ಟರ್ ದಿಲೀಪ್ ನಿಂಬಾಳಕರ, ಎ, ರುಕ್ಕಿಣಿ, ಪಿಎಸ್ಐ, ಜೆ. ಎಸ್. ಮುಲ್ಲಾ, ಪಿಎಸ್ಐ ಮತ್ತು ಬಸವರಾಜ. ಪ. ಉಜ್ಜಿನಕೊಪ್ಪ, ಪ್ರಕಾಶ. ಎಸ್. ಸಣಮನಿ, ಜೆ. ಎಸ್. ಲಮಾಣಿ, ಎನ್. ಎಮ್. ತೇಲಿ, ಎಮ್. ವಾಯ್. ಹಡಗಿನಾಳ, ಎಮ್. ಎಮ್. ತುಪ್ಪಾರೊಟ್ಟಿ, ಆರ್. ಬಿ. ಮದಿಹಳ್ಳಿ, ಗೀತಾ, ಟಿ. ಗಡಾದೆ ಇವರೆಲ್ಲರ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.