ರಿನ್ಯಾಶ್ರೀ ಸೊಲ್ಯೂಷನ್ ನಾವು ನೀಡಿರುವ ಸೂಚನೆ ಮಾತ್ರ ಪಾಲಿಸಬೇಕು. ಅದನ್ನು ಬಿಟ್ಟು ಅಂಗಡಿಕಾರರಿಗೆ ಯಾವುದೇ ಅನಾವಶ್ಯಕ ದಂಡ ಹಾಕುವಂತಿಲ್ಲ. ಏಕಾಏಕಿ ಅಂಗಡಿ, ಬೇಕರಿಗಳ ಮೇಲೆ ದಾಳಿ ನಡೆಸುವಂತಿಲ್ಲ. ಅಂಗಡಿಕಾರದ ಅನುಮತಿ ಪಡೆದುಕೊಂಡೆ ಆಹಾರ, ತಿಂಡಿ ತಿನಿಸುಗಳ ಪರಿಶೀಲನೆ ನಡೆಸಬೇಕು. ನಾವೇ ಅಧಿಕಾರಿಗಳಾಗಿದ್ದು ಅಂಗಡಿ ಬಂದ್ ಮಾಡುವುದಾಗಿ ಹೇಳುವುದು ಸೇರಿದಂತೆ ಇತರ ಯಾವುದೇ ಅಧಿಕಾರ ಅವರಿಗೆ ಇಲ್ಲ ಎಂದು FSSAI ಅಧಿಕಾರಿ ಜಗದೀಶ ಜಿಂಗೆ “ಜನಜೀವಾಳ”ಕ್ಕೆ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ : ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷೆ ನಡೆಸುವ ಅಧಿಕಾರ ಕೇವಲ ಎಫ್ ಎಸ್ ಎಸ್ ಎಐ ಇಲಾಖೆಗೆ ಮಾತ್ರ ಇದೆಯೇ ಹೊರತು ಬೇರೆಯವರಿಗೆ ಈ ಬಗ್ಗೆ ಯಾವುದೇ ಅಧಿಕಾರ ಇಲ್ಲ ಎಂದು ಬೆಳಗಾವಿಯ ಎಫ್ ಎಸ್ ಎಸ್ ಎಐ ಅಧಿಕಾರಿ ಜಗದೀಶ್ ಜಿಂಗೆ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಜನಜೀವಾಳಕ್ಕೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು,
ಖಾನಾಪುರ ತಾಲೂಕು ಕಕ್ಕೇರಿ ಗ್ರಾಮದಲ್ಲಿ ಅಂಗಡಿ- ಬೇಕರಿಗಳಿಗೆ ತೆರಳಿ ಫೋನ್ ಪೇ ಮೂಲಕ ಹಣ ವಸೂಲಿ ಮಾಡಿದ್ದ ಬೆಳಗಾವಿಯ ರಿನ್ಯಾ ಶ್ರೀ ಸೊಲುಶನ್ಸ್ ಗೆ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಕ್ಕೇರಿಗೆ ಹೋಗಿ ಹಣ ವಸೂಲಿ ಮಾಡಿದ್ದ ರಿನ್ಯಾಶ್ರೀ ಸೊಲುಶನ್ಸ್ ನ
ಕಿರಣ್ ಕುಮಾರ್ ಎನ್ನುವವರು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಕೇವಲ ಎಫ್ ಎಸ್ ಎಸ್ಎಐ ಮಾತ್ರ ಆಹಾರದ ಗುಣಮಟ್ಟ ಪರೀಕ್ಷೆ ನಡೆಸಬಹುದು. ಆದರೆ ಇವರು ಯಾವ ರೀತಿಯಲ್ಲಿ ದಂಡ ಹಾಕಿ ಹಣ ವಸೂಲಿ ಮಾಡುತ್ತಾರೋ ನನಗೆ ಗೊತ್ತಿಲ್ಲ. ಕಕ್ಕೇರಿಗೆ ತೆರಳಿದ್ದವರು ನಾವು ಅಧಿಕಾರಿಗಳು ಅಂತ ಹೇಳಿದ್ದಾರೋ ಗೊತ್ತಿಲ್ಲ. ನಮ್ಮ ಇಲಾಖೆಯ ಅಧಿಕಾರಿಗಳು ಇವರು ಅಲ್ಲ. ಆಹಾರ ಗುಣಮಟ್ಟ ಇಲಾಖೆ ರಿನ್ಯಾಶ್ರೀ ಸೊಲುಶನ್ಸ್ ನ್ನು ಬೆಳಗಾವಿ ಜಿಲ್ಲೆಯಲ್ಲಿ ನಿಯೋಜಿಸಿದ್ದರೂ ಅವರಿಗೆ ಅಂಗಡಿ ಹಾಗೂ ಬೇಕರಿಗಳನ್ನು ಬಂದ್ ಮಾಡುತ್ತೇನೆ ಎನ್ನುವ ಅಧಿಕಾರ ಇಲ್ಲ. ಕಕ್ಕೇರಿಯಲ್ಲಿ ಅವರು ಪಡೆದುಕೊಂಡಿರುವ ಹಣಕ್ಕೆ ಸಂಬಂಧಿಸಿ ಸರಕಾರದ ಅನುಮತಿ ಇದೆಯೋ ಇಲ್ಲವೋ ಎನ್ನುವುದನ್ನು ಅವರು ನೀಡಿರುವ ರಸೀದಿ ಪರಿಶೀಲನೆ ನಡೆಸಲಾಗುತ್ತದೆ. ಅವರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ನಮಗೆ ಇದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಕೆಲ ಸೂಚನೆಗಳನ್ನು ನೀಡಿದೆ. ಅದನ್ನು ಹೊರತುಪಡಿಸಿ ಬೇರೆ ಯಾವ ಕ್ರಮವನ್ನು ಅವರು ತೆಗೆದುಕೊಳ್ಳುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.ರಿನ್ಯಾಶ್ರೀ ಸೊಲ್ಯೂಷನ್ ನಾವು ನೀಡಿರುವ ಸೂಚನೆ ಮಾತ್ರ ಪಾಲಿಸಬೇಕು. ಅದನ್ನು ಬಿಟ್ಟು ಅಂಗಡಿಕಾರರಿಗೆ ಯಾವುದೇ ಅನಾವಶ್ಯಕ ದಂಡ ಹಾಕುವಂತಿಲ್ಲ. ಅವರು ಏಕಾಏಕಿ ಅಂಗಡಿಗಳ ಮೇಲೆ ದಾಳಿ ನಡೆಸುವಂತಿಲ್ಲ. ಅಂಗಡಿಕಾರರ ಅನುಮತಿ ಪಡೆದುಕೊಂಡೆ ಆಹಾರ ತಿಂಡಿ ತಿನಿಸುಗಳ ಪರಿಶೀಲನೆ ನಡೆಸಬೇಕು. ನಾವೇ ಅಧಿಕಾರಿಗಳು ಎಂದು ಹೇಳುವುದು, ಅಂಗಡಿ ಬಂದ್ ಮಾಡುವುದಾಗಿ ಹೇಳುವುದು
ಸೇರಿದಂತೆ ಇತರ ಯಾವುದೇ ಅಧಿಕಾರ ಅವರಿಗೆ ಇಲ್ಲ. ರಿನ್ಯಾಶ್ರೀ ಸೊಲುಶನ್ಸ್ ಮೇಲೆ ಯಾವುದೇ ದೂರುಗಳು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದರು.
ಜನಜೀವಾಳ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬೆನ್ನಿಗೆ ಆಹಾರ ಇಲಾಖೆಯ ಆಯುಕ್ತರಿಗೆ ವರದಿಯ ಸಮಗ್ರ ಮಾಹಿತಿಯನ್ನು ರವಾನಿಸಲಾಗಿದೆ. ರಿನ್ಯಾಶ್ರೀ ಸೊಲುಶನ್ಸ್ ಗೆ ಆರಂಭದಲ್ಲಿ ಅನುಮತಿ ನೀಡಲು ನಿರಾಕರಿಸಿದ್ದೆ. ಆದರೆ ಕೊನೆಯ ಹಂತದಲ್ಲಿ ಅನುಮತಿ ನೀಡಲಾಗಿದೆ. ಆಹಾರ ಗುಣಮಟ್ಟ ಪರೀಕ್ಷೆ ಬಗ್ಗೆ ಕೆಲ ಗೊಂದಲಗಳು ಇದ್ದವು. ತಪಾಸಣೆ ಎಂದರೆ ಅಂಗಡಿಕಾರರ ಮೇಲೆ ದಾಳಿ ಮಾಡಲಾಗುವುದು ಎಂಬ ಭಾವನೆ ಇದೆ. ನಾನು ಇಲಾಖೆ ಸೇರುವ ಮೊದಲು ಈ ಬಗ್ಗೆ ಹಲವು ದೂರುಗಳು ಇದ್ದವು. ಎಲ್ಲರೂ ಅಧಿಕಾರಿಗಳು ಎಂದು ಹೇಳಿಕೊಂಡು ದಾಳಿ ನಡೆಸುತ್ತಾರೆ. ಜನರಿಗೂ ಈ ಬಗ್ಗೆ ಗೊತ್ತಿಲ್ಲ. ಹಣ ವಸೂಲಿ ಸೇರಿದಂತೆ ಯಾವುದೇ ದೂರುಗಳು ಬಂದಲ್ಲಿ ನಮ್ಮ ಇಲಾಖೆಯನ್ನು ಸಾರ್ವಜನಿಕರು ಸಂಪರ್ಕಿಸಬಹುದು ಎಂದು ಅವರು ಮನವಿ ಮಾಡಿದರು.ಯಾವುದೇ ಕಾರಣಕ್ಕೂ ಅಂಗಡಿಗಳ ಮಾಲೀಕರಿಗೆ ನಾವೇ ಎಫ್ ಎಸ್ ಎಸ್ ಎಐ ಅಧಿಕಾರಿಗಳು ಎಂದು ಹೇಳುವಂತಿಲ್ಲ. ನಾವು ಸೊಲ್ಯೂಷನ್ ದವರು ಎಂದು ಮಾತ್ರ ಹೇಳಬೇಕು ಎಂದು ಸೂಚನೆ ನೀಡಲಾಗಿದೆ. ಅಂಗಡಿಕಾರರಿಗೆ ಯಾವುದೇ ಕಾರಣಕ್ಕೆ ಒತ್ತಡ ಹೇರಬಾರದು. ಇಂದೇ ದಂಡ ನೀಡಬೇಕು ಎಂದು ತಾಕೀತು ಮಾಡಬಾರದು. ರಿನ್ಯಾಶ್ರೀ ಸೊಲುಶನ್ಸ್ ಬಗ್ಗೆ ನಿನ್ನೆಯೇ ರಾಜ್ಯ ಆಯುಕ್ತರಿಗೆ ದೂರು ರವಾನೆ ಮಾಡಲಾಗಿದೆ. ಬೆಳಗಾವಿಯ ರಿನ್ಯಾಶ್ರೀ ಸೊಲುಶನ್ಸ್ ಬಗ್ಗೆ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಆಯುಕ್ತರು ನಿನ್ನೆ ಚರ್ಚೆ ಗಂಭೀರವಾಗಿ ನಡೆಸಿದ್ದಾರೆ. ಈ ಬಗ್ಗೆ ಇನ್ನೊಮ್ಮೆ ಇಂತಹ ದೂರು ಬಂದರೆ ಸಲ್ಯೂಷನ್ ಗೆ ಇಲಾಖೆ ನೀಡಿರುವ ಅನುಮತಿ ರದ್ದುಗೊಳಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಜನಜೀವಾಳ ಸತ್ಯ, ನಿಷ್ಪಕ್ಷಪಾತ ವರದಿಗೆ ಬೆಚ್ಚಿ ಬಿದ್ದು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳ ಉತ್ತರ ಏನು ಗೊತ್ತಾ ?:1. ಆಹಾರ ತಯಾರಿಕೆ / ಪ್ಯಾಕಿಂಗ್ / ರೀಲೇಬಲಿಂಗ್ ಆಹಾರ ಘಟಕಗಳಲ್ಲಿ ಆಹಾರ ಉದ್ದಿಮೆದಾರರೊಂದಿಗೆ ಚರ್ಚಿಸಿ ಆಹಾರ ಪದಾರ್ಥಗಳನ್ನು ಪ್ರತಿ 6 ತಿಂಗಳಿಗೊಮ್ಮೆ ಅಂಗಿಕೃತ ಎನ್.ಎ.ಬಿ.ಎಲ್ ಪ್ರಯೋಗಾಲಯದಲ್ಲಿ ವಿಶ್ಲೇಷಣೆ ಮಾಡಿಸುವಂತೆ ಆಹಾರ ಉದ್ದಿಮೆದಾರರಿಗೆ ಅರಿವು ಮೂಡಿಸುವುದು. 2. ಅಹಾರ ಉದ್ದಿಮೆದಾರರಿಗೆ ಅರಿವು ಮೂಡಿಸುವುದರ ಕುರಿತು ಪ್ರತಿ ತಿಂಗಳಿನ ಅಂತ್ಯಕ್ಕೆ ಈ ಮೆಲ್ಕಂಡ ಕಛೇರಿ ವಿಳಾಸಕ್ಕೆ ವರದಿ ಸಲ್ಲಿಸುವುದು .3 .ಆಹಾರ ಉದ್ದಿಮೆದಾರರಿಂದ ತಮ್ಮ ಸಂಸ್ಥೆಯ ಕಾರ್ಯ ನಿರ್ವಹಣೆಯ ಕುರಿತಂತೆ ಯಾವುದೇ ರೀತಿಯ ದೂರುಗಳು ಬಂದಲ್ಲಿ ಈ ಆದೇಶವನ್ನು ರದ್ದುಪಡಿಸಲಾಗುವುದು .4. ಎಫ್.ಎಸ್.ಎಸ್.ಎ ಇಲಾಖೆ ಬೆಳಗಾವಿಯಿಂದ ಈ ಕಾರ್ಯಕ್ಕೆ ಯಾವುದೇ ಅನುದಾನ ಬಿಡುಗಡೆ ಮಾಡುವುದಿಲ್ಲ . ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬೆಳಗಾವಿ ಇಲಾಖೆ ವತಿಯಿಂದ ಕಕ್ಕೇರಿ ಗ್ರಾಮದಲ್ಲಾಗಲಿ ಬೆಳಗಾವಿಯ ಯಾವುದೇ ಗ್ರಾಮದಲ್ಲಾಗಲಿ ಇಲಾಖೆಯ ಯಾವುದೇ ವ್ಯಕ್ತಿ ಅಹಾರ ತಪಾಸಣೆಗಾಗಿ ಹಣದ ಬೇಡಿಕೆ ಇಟ್ಟಿರುವುದಿಲ್ಲ . ಇಂತಹ ದೂರುಗಳಿದ್ದಲ್ಲಿ ಆಹಾರ ಮಳಿಗೆಯ ಮಾಲಿಕರು ನೇರವಾಗಿ ಜಿಲ್ಲಾ ಅಂಕಿತ ಅಧಿಕಾರಿಗಳು , ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬೆಳಗಾವಿ ಕಛೇರಿಗೆ ಖುದ್ದಾಗಿ ದೂರು ಸಲ್ಲಿಸಬಹುದು ಎಂದು ಹೇಳಿದ್ದಾರೆ.