ಬೆಳಗಾವಿ :
ಇದು ಬೆಳಗಾವಿ ನಗರದ ಪತ್ರಕರ್ತರಿಗೆ ಸಿಹಿ ಸುದ್ದಿ..!
ಬೆಳಗಾವಿ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಗೆ ಇದೀಗ ಹೊಸ ಅತ್ಯಾಧುನಿಕ ವ್ಯವಸ್ಥೆಯ ಬಸ್ ವ್ಯವಸ್ಥೆ ಮಾಡಲಾಗಿದೆ.
ರಾಜ್ಯ ಸರಕಾರ ಬೆಳಗಾವಿ ಇಲಾಖೆಗೆ ಹೊಸ ಬಸ್ ನೀಡಿದೆ.
ಈ ಹಿಂದೆ ಬೆಳಗಾವಿಯ ಜಿಲ್ಲಾಧಿಕಾರಿಯಾಗಿ ಅತ್ಯಂತ ಜನಪ್ರಿಯತೆಯ ತುತ್ತ ತುದಿಗೇರಿದ್ದ ಎನ್.ಜಯರಾಮ ಈಗ ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಜೊತೆಗೆ ಬೆಳಗಾವಿ ಜಿಲ್ಲೆಯ ಪೊಲೀಸ ವರಿಷ್ಠಾಧಿಕಾರಿಯಾಗಿ ಹೆಸರು ಗಳಿಸಿದ್ದ ಹೇಮಂತ್ ನಿಂಬಾಳ್ಕರ್ ಸಹಾ ರಾಜ್ಯ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಹಾಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆಯ ನಿರ್ದೇಶಕರಾಗಿರುವ ಗುರುನಾಥ ಕಡಬೂರು ಅವರ ಮುತುವರ್ಜಿ ಸಹಾ ಇದರ ಹಿಂದಿದೆ.
ಈ ಹಿನ್ನಲೆಯಲ್ಲಿ ಇದೀಗ ರಾಜ್ಯ ಸರಕಾರ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ಪತ್ರಕರ್ತರು ಜಿಲ್ಲೆಯ ವಿವಿಧ ಭಾಗಗಳಿಗೆ ವಿಶೇಷ ಕಾರ್ಯಕ್ರಮಗಳಿಗೆ ತೆರಳಲು ಅನುಕೂಲತೆ ಮಾಡಿಕೊಟ್ಟಿದೆ.
ಬೆಳಗಾವಿ ವಾರ್ತಾ ಮತ್ತು ಜನ ಸಂಪರ್ಕ ಇಲಾಖೆಗೆ ಬಂತು ಐಷಾರಾಮಿ ಬಸ್..!
