ಬೆಳಗಾವಿ :
ಚಳಿಗಾಲದ ರಾಜಧಾನಿ ಬೆಳಗಾವಿ ಈಗ ಚಳಿಯಿಂದ ಗಡಗಡ ಎನ್ನುತ್ತಿದೆ. ಕೊರೈಸುವ ಚಳಿಗೆ ಬೆಳಗಾವಿ ಜನತೆ ಈಗ ಕಂಗೆಟ್ಟಿದ್ದಾರೆ.
ಬೆಳಗಾವಿಯ ಬಸವನಕೊಳ್ಳದಲ್ಲಿ ಅತ್ಯಂತ ಕನಿಷ್ಠ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಬೆಳಗಾವಿ ಜಿಲ್ಲೆ ಸೇರಿದಂತೆ ಇಡೀ ಉತ್ತರ ಕರ್ನಾಟಕದಲ್ಲಿ ಇದೀಗ ಚಳಿಯಿಂದ ಜನ ಮನೆಯಿಂದ ಹೊರ ಬರಲು ಉದಾಸೀನತೆ ಪಡುವಂತಾಗಿದೆ.
ಫೆಬ್ರವರಿವರೆಗೂ ಚಳಿಯಿಂದ ಹೇಗೆ ಪಾರಾಗುವುದು ಎಂದು ಜನ ಯೋಚಿಸುವಂತಾಗಿದೆ.