ಬೆಳಗಾವಿ : ಬೆಳಗಾವಿ ನಗರದ ಕೆ.ಎಲ್.ಇ. ಸಂಸ್ಥೆಯ ಜಿ.ಎ.ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ಬಾಲಕಿಯರ ತಂಡವು ನಗರದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಥ್ರೋಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ. ಅದೇ ರೀತಿ ಬಾಲಕರ ಕಬ್ಬಡ್ಡಿ ತಂಡವೂ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದೆ.
ಅಂತಿಮ ಪಂದ್ಯದಲ್ಲಿ ಸೆಂಟ್ ಅಂಥೋನಿ ಪ್ರೌಢಶಾಲಾ ತಂಡವನ್ನು 2-1 ಅಂತರದಲ್ಲಿ ಸೋಲಿಸಿತು. ಗೌರಿ ಪೂಜಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದರು.
ಆಜೀವ ಸದಸ್ಯ ಮಹಾದೇವ ಬಳಿಗಾರ, ಉಪ ಪ್ರಾಚಾರ್ಯ ಸಿ.ಪಿ ದೇವಋಷಿ, ಕ್ರೀಡಾ ವಿಭಾಗದ ಪದಾಧಿಕಾರಿಗಳಾದ ಪ್ರಭು ನಿಡೋಣಿ, ಹನಮಂತ ವೀರಗಂಟಿ, ಶಿವರಾಯ ಏಳುಕೋಟಿ ವಿಜೇತ ಕ್ರೀಡಾಳುಗಳನ್ನು ಅಭಿನಂದಿಸಿದರು. ಈ ವೇಳೆ ಹಿರಿಯ ಶಿಕ್ಷಕರಾದ ಅಲ್ಕಾ ಪಾಟೀಲ, ಸಿ.ಎಂ. ಪಾಗಾದ, ಎಸ್.ಎಸ್.ಹಲವಾಯಿ ಹಾಜರಿದ್ದರು.
ಬೆಳಗಾವಿ ಜಿ.ಎ. ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ
