ಬೆಳಗಾವಿ ಕಾಲೇಜ್ ಹುಡುಗ-ಹೈಸ್ಕೂಲ್ ಹುಡುಗಿ ಮಧ್ಯೆ ಪ್ರೇಮ..?
ಕರ್ಲೆ-ನಾವಗೆ ಲವ್ ಸ್ಟೋರಿಗೆ ವಿಲನಗಳಾಗಿ ಎಂಟ್ರಿಕೊಟ್ಟ ಬಾದರವಾಡಿ ಬಾಲಕರು..!
ಬುದ್ದಿವಾದ ಹೇಳಿದ್ದ ಪಂಚನ ಮೇಲೆ ಮಧ್ಯರಾತ್ರಿ ಚಿಗುರು ಮೀಸೆ ಹುಡುಗರಿಂದ ಹಲ್ಲೆ..!
ಮನೆ ಮೇಲೆ ಕಲ್ಲು ತೂರಾಟ, ಕಾರು, ಬೈಕ್ ಗಾಜು ಪುಡಿಪುಡಿ..!
ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೊಬಸ್ತ..!
ಜನ ಜೀವಾಳ ಜಾಲ ಬೆಳಗಾವಿ : ಹೈಸ್ಕೂಲ್ ಓದುತ್ತಿರುವ ಬಾಲಕಿ ಹಾಗೂ ಕಾಲೇಜ್ ಯುವಕನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಮಾಡಲು ಯತ್ನಿಸಿದ್ದ ಪಂಚನ ಮನೆ ಮೇಲೆ ನಿನ್ನೆ ತಡರಾತ್ರಿ 25-30 ಅಪ್ರಾಪ್ತ ವಯಸ್ಸಿನ ಯುವಕರ ಗುಂಪೊಂದು ಮಾರಕಾಸ್ತ್ರಗಳೊಂದಿಗೆ ಬಂದು ಕಲ್ಲು ತೂರಾಟ ನಡೆಸಿ ಗ್ರಾಮದಲ್ಲಿ ಪುಂಡಾಡಿಕೆ ನಡೆಸಿ ಪರಾರಿಯಾಗಿರುವ ಘಟನೆ ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ನಡೆದಿದೆ.
RPD ಕಾಲೇಜಿನಲ್ಲಿ PUC ಓದುತ್ತಿರುವ ನಾವಗೆ ಗ್ರಾಮದ ಯುವಕ ಹಾಗೂ 10 ನೇ ತರಗತಿಯಲ್ಲಿ ಓದುತ್ತಿರುವ ಕರ್ಲೆ ಗ್ರಾಮದ ಬಾಲಕಿ ಮಧ್ಯೆ ಲವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಕದ ಬಾದರವಾಡಿ ಗ್ರಾಮದ ಹೈಸ್ಕೂಲ್ ಹುಡುಗರು ಬಾಲಕಿಯನ್ನು ಪ್ರೀತಿಸುತ್ತಿರುವ ನಾವಗೆ ಗ್ರಾಮದ ಯುವಕನನ್ನು ಹೆದರಿಸಿ ಬೆದರಿಸಲು ಯತ್ನಿಸಿದ್ದಾರೆ. ಆಗ ಯುವಕನ ಕಡೆಯಿಂದ ಮಾರುತಿ ಹುರಕಡ್ಲಿ ಎಂಬ ಪಂಚ ಇವರಿಬ್ಬರೂ ಬುದ್ಧಿವಾದ ಹೇಳಿದ್ದಾರೆ.
ಆದರೆ ಇದನ್ನೆ ಪ್ರತಿಷ್ಠೆಯಾಗಿ ತೆಗೆದುಕೊಂಡು ಅಪ್ರಾಪ್ತ ವಯಸ್ಸಿನ 30 ರಿಂದ 35 ಹುಡುಗರ ಗುಂಪೊಂದು ನಿನ್ನೆ ತಡರಾತ್ರಿ 11 ಗಂಟೆ ಸುಮಾರಿಗೆ ನಾವಗೆದಲ್ಲಿರುವ ಪಂಚನ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಮನೆ ಗಾಜು, ಮೂರು ಕಾರು, ಬೈಕ್ ಗಾಜುಗಳು ಒಡೆದು ಹೋಗಿವೆ.
ಘಟನೆ ನಡೆಯುತ್ತಿದ್ದಂತೆ ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಗ್ರಾಮೀಣ ಪಿಐ ಹಿರೇಮಠ , ಪಿಎಸ್ಐ ಲಕ್ಕಪ್ಪಾ ಜುಡಟ್ಟಿ ಸ್ಥಳಕ್ಕೆ ಆಗಮಿಸಿ, ತಕ್ಷಣ ಬಿಗಿ ಬಂದೊಬಸ್ತ ಮಾಡಿದ್ದಾರೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಬಲೆ ಬಿಸಿ, ಮುನ್ನಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೊಬಸ್ತ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾರುತಿ ಹರಕಡ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.