ಬೆಳಗಾವಿ: ಮರಾಠಿಗರ ಮತವನ್ನು ಸೆಳೆಯುವ ಉದ್ದೇಶದಿಂದ ಮರಾಠಿ ಮೇಯರ್ ಮಾಡಲಾಗಿದ್ದರೂ ಕೂಡ ಅವರು ಬಿಜೆಪಿ ಪ್ರಚಾರಕ್ಕೆ ಅಷ್ಟೊಂದು ಕಾಣಿಸಿಕೊಳ್ಖುತ್ತಿಲ್ಲ.
ರಾಜ್ಯ ವಿಧಾನಸಭೆ ಚುನಾವಣೆ ಕಾವೇರುತ್ತಿದೆ. ಜಿಲ್ಲೆಗೆ ಕೇಂದ್ರ ಮತ್ತು ರಾಜ್ಯ ಮಟ್ಟದ ಬಿಜೆಪಿ ನಾಯಕರು ಬರುತ್ತಿದ್ದಾರೆ. ಆದರೆ ಮಹಾನಗರದ ಪ್ರಥಮ ಪ್ರಜೆ ಎಂದು ಕರೆಯಿಸಿಕೊಳ್ಳುವ ಮೇಯರ್ ಶೋಭಾ ಸೋಮನ್ನಾಚೆ ಕಾಣಿಸಿಕೊಳ್ಳುವುದು ಅಪರೂಪವಾಗುತ್ತಿದೆ.ಇದು ಮರಾಠಿ ವಲಯದಲ್ಲಿ ಅಷ್ಟೇ ಅಲ್ಲ ಬಿಜೆಪಿಯಲ್ಲೂ ಚರ್ಚೆಗೆ ಎಡೆ ಮಾಡಿಕೊಡುತ್ತಿದೆ.
ಈ ಹಿಂದೆ ಕೂಡ ಮೇಯರ್ ಪುತ್ರ ಕೆಲವರ ಮುಂದೆಯೇ ತೇ ಕೋನ್ ಎಂದು ಶಾಸಕರ ಬಗ್ಗೆ ಮಾತುಗಳನ್ನು ಆಡಿದ್ದನು. ಅದರ ಬಗ್ಗೆ ಜನಜೀವಾಳ ವರದಿಮಾಡಿತ್ತು. ಈಗ ಪ್ರಚಾರದ ಕಾವು ಏರುತ್ತಿದೆ. ಬಹುತೇಕ ನಗರಸೇವಕರು ಅಭಯ ಪಾಟೀಲರ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಮೇಯರ್ ಮಾತ್ರ ಅಂತರ ಕಾಯ್ದುಕೊಳ್ಳುತ್ತಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಕೇಂದ್ರ ಸಚಿವರು, ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಉನ್ನತ ನಾಯಕರೂ ಬಂದಾಗಲೂ ಇವರು ಹೆಚ್ವಿನ ಆಸಕ್ತಿವಹಿಸಿ ಬಾರದೇ ಇರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.