ಬೆಳಗಾವಿ:
ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಹಕ ಅಭಿಯಂತರಾದ ಮಹಾಂತೇಶ ವಿ. ಹಿರೇಮಠ ಮತ್ತು ಬೆಳಗಾವಿಯವರೇ ಆದ ಸದ್ಯ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಶಿವಾನಂದ ಹೂಗಾರ ಅವರನ್ನು ಇಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಅಭಿಯಂತರಗಳ ಸೇವಾ ಸಂಘದಿಂದ ಸತ್ಕರಿಸಿ ಅಭಿನಂದಿಸಲಾಯಿತು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಭಿಯಂತರುಗಳ ಒಕ್ಕೂಟದ 25 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ನಡೆದ ಚುನಾವಣೆಯಲ್ಲಿ ಎಂ.ವಿ ಹಿರೇಮಠ ಇವರು ಅಖಿಲ ಭಾರತ ಡಿಪ್ಲಮೊ ಇಂಜಿನಿಯರ್ಗಳ ರಾಷ್ಟ್ರೀಯ ಒಕ್ಕೂಟದ ಕಾರ್ಯದರ್ಶಿಯಾಗಿ (ಸ್ವಾಯತ್ತ ಸಂಸ್ಥೆಗಳು) ಮತ್ತು ಶಿವಾನಂದ ಹೂಗಾರ ಇವರು ಅಧ್ಯಕ್ಷರಾಗಿ ಆಯ್ಕೆಯಾದ ನಿಮಿತ್ತ ಅಭಿನಂದನಾ ಸಮಾರಂಭವನ್ನು ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಇಂಜಿನಿಯರ್ ಭವನದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು. ಪ್ರಸ್ತುತ ಹಿರೇಮಠ ರಾಜ್ಯ ಘಟಕಕ್ಕೆ ಹಿರಿಯ ಉಪಾಧ್ಯಕ್ಷರಾಗಿ, ಹೂಗಾರ ಇವರು ಗೌ.ಅಧ್ಯಕ್ಷರಾಗಿ ಸೇವೆ ಮಾಡುತ್ತಿದ್ದಾರೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಧ್ಯಕ ಬಿ. ಪಿತಾಂಬರ ಸ್ವಾಮಿ ಹಾಗೂ ಒಕ್ಕೂಟದ ಇತರ ಪದಾಧಿಕಾರಿಗಳು, ಶಾಲು ಹೊದಿಸಿ ಫಲಪುಷ್ಟ, ಸ್ಮರಣಿಕೆಯನಿತ್ತು ಸತ್ಕರಿಸಿ ಅಭಿನಂದಿಸಿದರು. ಅಭಿನಂದನೆಗೆ ಉತ್ತರಿಸಿದ ಎಂ.ವಿ ಹಿರೇಮಠ ಇಂದು ಅಧುನಿಕ ಭಾರತದ ಮತ್ತು ಮೆಕ್ ಇನ್ ಇಂಡಿಯಾದ ನಿರ್ಮಾಣದಲ್ಲಿ ಅಭಿಯಂತರ ಪಾತ್ರ ಬಹಳ ಮಹತ್ವದ್ದಾಗಿದೆ, ಅಭಿಯಂತರು ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಬಾಳೆಕುಂದ್ರಿಯವರ ಹೆಜ್ಜೆಗಳನ್ನು ಅನುಸರಿಸಿದಲ್ಲಿ ಮಾತ್ರ ಇದು ಸಾಧ್ಯ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಡಾ.ಕೆ.ಎಸ್. ಕೃಷ್ಣಾರೆಡ್ಡಿ. ಮುಖ್ಯ ಅಭಿಯಂತ ಗೋವಿಂದರಾಜ ವಿ, ಮುಖ್ಯ ಯೋಜನಾ ಅಧಿಕಾರಿ ಶಿವಯೋಗಿ ಹಿರೇಮಠ, ಪ್ರಧಾನ ಇಂಜಿಇಯರ್ ಪ್ರದೀಪ ಮಿತ್ರ ಮಂಜುನಾಥ, ಕರ್ನಾಟಕ ಇಂಜಿನಿಯರುಗಳ ಒಕ್ಕೂಟದ ಅಧ್ಯಕ್ಷ ಎಂ ನಾಗರಾಜ, ಕರ್ನಾಟಕ ಇಂಜಿನಿಯರುಗಳ ಸಂಘದ ಗೌ.ಅಧ್ಯಕ್ಷ ದೇವರಾಜು, ಅಧ್ಯಕ್ಷ ತಿಮ್ಮೇಗೌಡ ಉಪಸ್ಥಿತರಿದ್ದರು.