ಬೆಳಗಾವಿ: ಬೆಳಗಾವಿ ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ ಈ ವರ್ಷದ ಪ್ರಥಮ ಮಳೆಯಾಗಿದೆ.
ಮಳೆಯ ಜೊತೆಗೆ ಜೋರಾದ ಗಾಳಿ ಹಾಗೂ ಸಿಡಿಲಿನ ಆರ್ಭಟ ಕಂಡು ಬಂತು.
ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಆದರೆ, ಹಣ್ಣು- ಹಂಪಲು ಬೆಳೆಗಳ ಮೇಲೆ ಮಳೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿ ಕೆಲ ದೇವಸ್ಥಾನಗಳಲ್ಲಿ ಈಗ ಜಾತ್ರೆಯ ಸಂಭ್ರಮ. ಇದರಿಂದ ಸೇರಿದ್ದ ಭಕ್ತರು ತುಸು ತೊಂದರೆ ಅನುಭವಿಸಬೇಕಾಯಿತು. ಮಳೆಯಿಂದಾಗಿ ಬೆಳಗಾವಿ ಮಹಾನಗರದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತು. ಹವಾಮಾನ ಇಲಾಖೆ ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರದಿಂದ ಕೆಲ ದಿನಗಳ ಕಾಲ ಮಳೆ ಬೀಳುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿತ್ತು.