ಬೆಳಗಾವಿ :
ಬೆಳಗಾವಿಯ ಪ್ರತಿಷ್ಠಿತ ಶಬರಿ ಹೋಟೆಲ್ ಮಾಲಕ, ಶ್ರೀ ಗುರು ವಿವೇಕಾನಂದ ಸೊಸೈಟಿಯ ನಿರ್ದೇಶಕ
ಸುರೇಶ ನಾಯರಿ (52 )ಸೋಮವಾರ ರಾತ್ರಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ನಗರದ ಹರ್ಷ ಹಾಗೂ ರಾಮದೇವ್ ಹೊಟೇಲ್ ಬಳಿಯಿರುವ ಹೋಟೆಲ್ ಶಬರಿಯ ಮಾಲಕರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.
ಅವರ ಅಂತ್ಯಕ್ರಿಯೆ ನವೆಂಬರ್ 14 ರಂದು ಸಂಜೆ 4:00 ಕ್ಕೆ ಕುಂದಾಪುರ ಬಳಿಯ ಕಿರಿಮಂಜೇಶ್ವರದಲ್ಲಿ ನಡೆಯಲಿದೆ. 1971ರಲ್ಲಿ ಜನಿಸಿದ ಅವರು 1987ರಲ್ಲಿ ಸಹೋದರನ ಜೊತೆ ಬೆಳಗಾವಿಯಲ್ಲಿ ಪ್ಯಾನ್ ಶಾಪ್ ಮತ್ತು ಟೀ ಶಾಪ್ ನಲ್ಲಿ ಕೆಲಸ ಆರಂಭಿಸಿದರು. ಆ ಅನುಭವದೊಂದಿಗೆ 1991ರಲ್ಲಿ ಕೆಎಲ್ ಇ ಆಸ್ಪತ್ರೆ ಬಳಿ ಸ್ವಂತ ಉದ್ಯಮ ಆರಂಭಿಸಿದರು. 2001ರಲ್ಲಿ ಆಟೋ ನಗರದಲ್ಲಿ ಹರ್ಷಾ ಫ್ಯಾಮಿಲಿ ರೆಸ್ಟೋರೆಂಟ್, ರಾಮ್ ದೇವ್ ಹೋಟೆಲ್ ಬಳಿ 2013 ರಲ್ಲಿ ಶಬರಿ ಹೋಟೆಲ್, ಶಿವಬಸವ ನಗರದ ಕೆಪಿಟಿಸಿಎಲ್ ಸಭಾಭವನದ ಬಳಿ 2019 ರಲ್ಲಿ ಶ್ರೀ ಸಾಯಿ ಶಬರಿ ಹೋಟೆಲ್ ಆರಂಭಿಸಿದ್ದರು. ಜನಾನುರಾಗಿ ಆಗಿದ್ದ ಅವರು ಎಲ್ಲರ ಸ್ನೇಹ ಸಂಪಾದಿಸಿದ್ದರು.
ಅವರ ನಿಧನಕ್ಕೆ ಬೆಳಗಾವಿಯ ಉದ್ಯಮಿಗಳು ಶೋಕ ವ್ಯಕ್ತಪಡಿಸಿದ್ದಾರೆ.