ಬೆಳಗಾವಿ : ಇಲ್ಲಿಯ ಶಾಹುನಗರದ ಯುವ ಕರ್ನಾಟಕ ಅಭಿವೃದ್ಧಿ ಸಂಘದ 25 ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮ ಪ್ರಯುಕ್ತ ಮೂರು ದಿನಗಳ ಕಾಲ ಕರ್ನಾಟಕ ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮಗಳನ್ನು ಶಾಹುನಗರ ಶಿವಬಸವ ಮಾರ್ಗದಲ್ಲಿ ಏರ್ಪಡಿಸಲಾಗಿದೆ.
ನ. 7 ರಂದು ಸಂಜೆ 5:30 ಕ್ಕೆ ಉಪನ್ಯಾಸ, ಹಾಡುಗಳು, ನೃತ್ಯ ಮುಂತಾದ ಮನೋರಂಜನಾ ಕಾರ್ಯಕ್ರಮ ಮತ್ತು ಜೂನಿಯರ್ ಶಿವರಾಜ್ ಕುಮಾರ್ (ಇಸ್ಮಾಯಿಲ್) ಕಲಾತಂಡದಿಂದ ಹಾಡು, ನೃತ್ಯ, ಮಿಮಿಕ್ರಿ ನಡೆಯಲಿದೆ.
ನ. 8 ರಂದು ಶನಿವಾರ ಸಂಜೆ 5:30 ಕ್ಕೆ ರಾಜ್ಯಮಟ್ಟದ “ಯುವ ಗಂಧರ್ವ” ಕರೋಕೆ ಹಾಡುವ ಸ್ಪರ್ಧೆ

ನ. 9 ರಂದು ಸಂಜೆ 5:30 ಕ್ಕೆ ಸಾಮಾಜಿಕ ಕಾರ್ಯಕರ್ತ ವೀರೇಶ ಕಿವಡಣ್ಣವರ ಪ್ರಾಯೋಜಕತ್ವದಲ್ಲಿ ಗಂಗಾವತಿ ಪ್ರಾಣೇಶ ಹಾಗೂ ಅವರ ತಂಡದಿಂದ ನಗೆ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಈಶ್ವರ ಗಾಣಿಗೇರ ಮತ್ತು ಕಾರ್ಯದರ್ಶಿ ಬಸವರಾಜ ಹಪ್ಪಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


