ಬೆಳಗಾವಿ : ಹಿರಿಯ ಸಾಹಿತಿ ಬಿ. ಎಸ್. ಗವಿಮಠ ಅವರ ಎರಡು ಕೃತಿಗಳು ರವಿವಾರ ದಿನಾಂಕ 5 ರಂದು ಬೆಳಗಿನ 11 ಗಂಟೆಗೆ ಕನ್ನಡ ಸಾಹಿತ್ಯ ಭವನದಲ್ಲಿ ಲೋಕಾರ್ಪಣೆಗೊಳ್ಳಲಿವೆ.
ಚನ್ನಮ್ಮ ವೃತ್ತದಲ್ಲಿನ ಕನ್ನಡ ಸಾಹಿತ್ಯ ಭವನದ ವಿಶ್ವಸ್ತ ಮಂಡಳಿ, ಎಸ್. ಡಿ. ಇಂಚಲ ಸ್ಮಾರಕ ಸಮಿತಿ, ಉಳವೀಶ ಸಾಂಸ್ಕೃತಿಕ ಪ್ರತಿಷ್ಠಾನ, ಜಿಲ್ಲಾ ಲೇಖಕಿಯರ ಸಂಘ, ಡಾ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ಟಿ ಎಸ್ ಆರ್ ಪ್ರಶಸ್ತಿ ಪುರಸ್ಕೃತ ಡಾ.ಸರಜೂ ಕಾಟ್ಕರ್ ಮತ್ತು ಗಡಿನಾಡು ಚೇತನ ಪ್ರಶಸ್ತಿ ಪುರಸ್ಕೃತ ಬಿ.ಎಸ್. ಗವಿಮಠ ಅವರನ್ನು ಅಭಿನಂದಿಸಿ ಗೌರವಿಸುವುದು.
ಬೆಳಗಾವಿ ಸಾವಿರ ನೆನಪುಗಳು ಹಾಗೂ ಕೂಡಲಸಂಗಮ ಕೃತಿಗಳ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆಯನ್ನು ನಾಡಹಬ್ಬ ಸಮಿತಿಯ ಅಧ್ಯಕ್ಷ ಡಾ. ಎಚ್.ಬಿ. ರಾಜಶೇಖರ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಖ್ಯಾತ ನ್ಯಾಯವಾದಿ ಎಸ್.ಎಂ. ಕುಲಕರ್ಣಿ ಆಗಮಸಲಿದ್ದಾರೆ. ಕೃತಿಗಳ ಕುರಿತು ರಂಗಚಿಂತಕ ಡಾ.ರಾಮಕೃಷ್ಣ ಮರಾಠೆ, ಹೋರಾಟಗಾರ ಅಶೋಕ ಚಂದರಗಿ ಮತ್ತು ನಾಟಕಗಾರ ಶಿರೀಷ ಜೋಶಿ ಮಾತನಾಡಲಿದ್ದಾರೆ. ಸಾಹಿತ್ಯಾಸಕ್ತರು ಆಗಮಿಸಬೇಕೆಂದು ಹಿರಿಯರಾದ ಡಾ.ಎಫ್ ವಿ ಮಾನ್ವಿ, ಪ್ರೊ.ಎಂ.ಎಸ್ ಇಂಚಲ, ಆರ್ ಬಿ ಕಟ್ಟಿ, ಬಸವರಾಜ ಗಾರ್ಗಿ ಕೋರಿದ್ದಾರೆ.