ಬೆಳಗಾವಿ : ಶಿವಗಿರಿ ಸೊಸೈಟಿ ವತಿಯಿಂದ ನಗರದ ಹಳೆ ಪಿ ಬಿ ರಸ್ತೆಯ ಶುಭಾರಂಭ ಸಾಂಸ್ಕೃತಿಕ ಭವನದಲ್ಲಿ ಮಹಿಳಾ ದಿನಾಚರಣೆ ಹಾಗೂ ಶಿವಗಿರಿ ಮಹಿಳಾ ಸ್ವ ಸಹಾಯ ಗುಂಪುಗಳ ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಹ್ಯಾಪಿ ಹಾರ್ಟ್ ಫೌಂಡೇಶನ್ ಮುಖ್ಯಸ್ಥೆ ಡಾ. ಸ್ಫೂರ್ತಿ ಮಾಸ್ತಿಹೋಳಿ ಕಾರ್ಯಕ್ರಮ ಉದ್ಘಾಟಿಸಿ ಮಹಿಳೆಯರ ಕುರಿತು ಮಾತನಾಡಿ, ದೈನಂದಿನ ಜೀವನದ ಕೆಲಸ ಕಾರ್ಯಗಳ ಒತ್ತಡದ ನಡುವೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕಾಳಜಿ ವಹಿಸದೆ ಹಲವಾರು ಸಮಸ್ಯೆಗಳಿಗೆ ದಾರಿ ಮಾಡಿಕೊಳ್ಳುತ್ತೇವೆ. ಎಷ್ಟೇ ಒತ್ತಡಗಳಿದ್ದರೂ ನಮ್ಮ ವೈಯಕ್ತಿಕ ಕೌಟುಂಬಿಕ ಜೀವನದ ಬಗ್ಗೆ ಕಾಳಜಿವಹಿಸಿ ದಲ್ಲಿ ನಮ್ಮ ಜೀವನವನ್ನು ಆರೋಗ್ಯಕರವಾಗಿ ಸುಖಮಯವಾಗಿ ಇಟ್ಟುಕೊಳ್ಳಬೇಕು ಎಂದರು.
ಮಹಿಳೆಯರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ನಂತರ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಸೊಸೈಟಿಯ ಅಧ್ಯಕ್ಷ ಸುಜನ್ ಕುಮಾರ್, ಬಿಲ್ಲವ ಸಂಘದ ಅಧ್ಯಕ್ಷ ಹಾಗು ಸೊಸೈಟಿಯ ಉಪಾಧ್ಯಕ್ಷ ಸುನಿಲ್ ಪೂಜಾರಿ, ನಿರ್ದೇಶಕರಾದ ಸುಂದರ ಕೋಟ್ಯಾನ್ , ಸುರೇಶ್ ಜತನ್ , ಬೇಬಿ ಪೂಜಾರಿ , ರಮೇಶ್ ಬಸನಾಯ್ಕ್ ಹಾಜರಿದ್ದರು. ಸೊಸೈಟಿಯ ಸಲಹಾ ಸಮಿತಿ ಸದಸ್ಯರಾದ ಗಣೇಶ್ ಪೂಜಾರಿ, ನೇತ್ರಾವತಿ ಸಬ್ನಿಸ್, ಲಕ್ಷ್ಮೀ ಪೂಜಾರಿ ಉಪಸ್ಥಿತರಿದ್ದರು. ಸೊಸೈಟಿಯ ಸಿಬ್ಬಂದಿವರ್ಗ, ಪಿಗ್ಮಿ ಸಂಗ್ರಹಕಾರರು ಹಾಜರಿದ್ದರು. ವ್ಯವಸ್ಥಾಪಕರಾದ ಚಂದ್ರ ಹೆಚ್. ಪೂಜಾರಿ ನಿರೂಪಿಸಿ ವಂದಿಸಿದರು.


