ಬೆಳಗಾವಿ :
ಬೆಳಗಾವಿ ಅಧಿವೇಶನಕ್ಕೆ ಇದೀಗ ಕೋವಿಡ್ ಕಾರ್ಮೋಡ ಉಂಟಾಗಿದೆ.
ಕೋವಿಡ್ ಭೀತಿ ಹಿನ್ನೆಲೆ ರಾಜ್ಯ ವಿಧಾನಮಂಡಲ ಅಧಿವೇಶನವೂ ಅವಧಿಗೂ ಮುನ್ನವೇ ಮೊಟಕುಗೊಳಿಸುವ ಸಾಧ್ಯತೆಯಿದೆ .
ಚೀನಾದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ದೇಶಕ್ಕೂ ವ್ಯಾಪಿಸುವ ಆತಂಕ ಎದುರಾಗಿದೆ .
ಈ ಹಿನ್ನಲೆ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೂ , ಶಾಸಕರು ಅಧಿವೇಶನಕ್ಕೆ ಆಗಮಿಸಲು ನಿರಾಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ . ಹೀಗಾಗಿ , ಮಂಗಳವಾರ ಅಥವಾ ಬುಧವಾರಕ್ಕೆ ಅಂತ್ಯಗೊಳಿಸುವ ಚಿಂತನೆಯಿದೆ ಎಂದು ಹೇಳಲಾಗುತ್ತಿದೆ.