ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಪಾಟೀಲ ನಿಧನ..!
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದ ಖಾಸಬಾಗ ಗೌಡ್ರು..!
ಬೆಳಗಾವಿ: ನಗರದ ಖಾಸಬಾಗ ನಿವಾಸಿ ಬಸವರಾಜ ಬಸವಂತಪ್ಪಾ ಪಾಟೀಲ ಅವರು ಅನಾರೋಗ್ಯದಿಂದ ದಿ 24-2-2024 ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಮೂಲತಃ ಅಗಸಗಿ ಗ್ರಾಮದವರಾದ ಇವರು ಹಲವು ದಶಕಗಳ ಹಿಂದೆ ನಗರದ ಖಾಸಬಾಗ ಪ್ರದೇಶದಲ್ಲಿ ಬಂದು ನೆಲೆಸಿದ್ದರು. ಪಾಟೀಲ ಜನಪ್ರೀಯ ವ್ಯಕ್ತಿಯಾಗಿದ್ದರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಸೈ ಎನಿಸಿಕೊಂಡಿದ್ದರು.
ಬಸವರಾಜ ಪಾಟೀಲರು ನಗರದ ಸೇಂಟ್ ಪಾಲ್ಸ್ ಹೈಸ್ಕೂಲ್ ನಲ್ಲಿ ಮಾಧ್ಯಮಿಕ ಶಾಲೆ,
RLS ಕಾಲೇಜಿನಲ್ಲಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ನಂತರ ತುಮಕೂರಿನ ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದ ಇವರ ಶೈಕ್ಷಣಿಕ ಜೊತೆಗೆ ಕ್ರೀಡಾ ಚಟುವಟಿಗಳಲ್ಲಿ ಚುರುಕಾಗಿದ್ದ ಇವರು ಕುಸ್ತಿಪಟುವಾಗಿ ಉತ್ತಮ ಸಾಧನೆ ಮಾಡಿದ್ದರು.
ಬೆಳಗಾವಿಯ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿ ನಂತರ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟರು. ರಾಹುಲ್ ಬಿಲ್ಡ್ಸ್ಗೆ ಪ್ರವರ್ತಕರಾಗಿ ಬಿಲ್ಡರ್ ಆಗಿ ಬೆಳೆದರು. ಬೆಳಗಾವಿಯಲ್ಲಿ ಅಪಾರ್ಟ್ಮೆಂಟ್ ನಿರ್ಮಾಣಗಳನ್ನು ಪ್ರಾರಂಭಿಸಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದರು.
ಮೃತರಿಗೆ ಪತ್ನಿ, ಪುತ್ರ, ಪುತ್ರಿ, ಸಹೋದರರು, ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಸದಾಶಿವ ನಗರದ ರುದ್ರಭೂಮಿಯಲ್ಲಿ ನೆರವೇರಲಿದೆ.
Builder Basavaraj B Patil passed away.
Belagavi : Basavaraj B Patil resident of khasabag died on 24-2-2024 in city private Hospital. he was suffering from heart disease.
Basavraj B Patil was born on May 30, 1947, in Belagavi, to Basvantappa Patil and Mallamma Patil from Agasagi, Belagavi. He attended St. Paul’s High School in Belagavi and later participated in the Republic Day parade in Delhi. Continuing his education, he completed his Pre-University at RLS College, Belagavi, followed by a degree in Mechanical Engineering from Sidhganga Institute of Technology, Tumkur. Alongside his academic pursuits, he excelled in sports as a wrestler. Beginning his career as a professor at KLE Engineering College in Belagavi, he later ventured into the real estate sector, becoming a promoter and builder for Rahul Builds. He pioneered apartment constructions in Belagavi, leaving a lasting impact on the city’s skyline.
he was survived by wife, son, daughter, brothers, sisters and in laws.
Today afternoon deceased last rituals will be held in sadashiv nagar.