ಬೆಳಗಾವಿ :
ಬೆಳಗಾವಿ ಪೊಲೀಸರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ.
ಬೆಳಗಾವಿ ಎಪಿಎಂಸಿ ಪೊಲೀಸ್ ಕಾರ್ಯಾಚರಣೆ ಕುಖ್ಯಾತ ಅಂತರರಾಜ್ಯ ವಂಚಕರ ಬಂಧನ ಒಟ್ಟು ರೂ .6,09,000 ಮೌಲ್ಯದ ಬಂಗಾರ , ನಗದು, ಮೋಟರ್ ಸೈಕಲ್ಗಳ ಜಪ್ತಿ
ಮಾಡಿಕೊಂಡಿದ್ದಾರೆ.
ದಿನಾಂಕ . 29/11/2022 ಎ.ಪಿ.ಎಂ.ಸಿ ಪೊಲೀಸ್ ಠಾಣೆಯ ಹದ್ದಿಯ ಮುರಳೀಧರ ಕಾಲನಿಯ ಸೋಮಲಿಂಗ ಅಮ್ಮಣಗಿ , ರವರ ಎ.ಟಿ.ಎಮ್ ಕಾರ್ಡನ್ನು ಬದಲಾಯಸಿಕೊಂಡು ಅವರ ಎ.ಟಿ.ಎಮ್ ಕಾರ್ಡದಿಂದ 4,03,789 / – ರೂಗಳನ್ನು ತೆಗೆದುಕೊಂಡ ಮೋಸ ಮಾಡಿದ ಬಗ್ಗೆ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಎಸಿಪಿ ಮಾರ್ಕೆಟ್ ಉಪವಿಭಾಗ ಬೆಳಗಾವಿ ಇವರ ಮಾರ್ಗದರ್ಶದಲ್ಲಿ ಹಾಗೂ ರಮೇಶ ಸಿ ಅವಜಿ , ಪಿಐ ರವರ ನೇತೃತ್ವದಲ್ಲಿ ಸಿಬ್ಬಂದಿಯವರ ತಂಡ ದಿನಾಂಕ : 09-03-2023 ರಂದು ಇಬ್ಬರು ಆರೋಪಿತರ ಪತ್ತೆ ಮಾಡಿದ್ದು . 1 ) ಅಮೋಲ್ ಭಗವನ್ ಶೆಂಡೆ , ಸಾ : ನೇಸರಿ , ತಾ : ಗಡಹಿಂಗ್ಲಜ್ ಜಿಲ್ಲಾ : ಕೊಲ್ಲಾಪುರ 2 ) ಶ್ರವಣ ಸತೀಶ ಮಿನಜಗಿ , ಸಾನ ಕೇದಾರನಾಥ ನಗರ , ಎಮ್ಐಡಿಸಿ ತಾ : ಜಿ : ಸೊಲ್ಲಾಪುರ ಇವರನ್ನು ದಸ್ತಗಿರಿ ಮಾಡಿ ಅವರಿಂದ 1 ) 1,10,00 / – ರೂ ಮೌಲ್ಯದ 20 ಗ್ರಾಂ ಬಂಗಾರದ ಆಭರಣಗಳು , 2 ) ನಗದು ಹಣ 1.39,000 / – 3 ) 3 ] ಒಟ್ಟು ರೂ .3.60.000 ಮೌಲ್ಯದ 02 ಮೋಟಾರು ಸೈಕಲ್ ಹೀಗೆ ಒಟ್ಟು 6,09,000 / – ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ಕ್ರಮ ಕೈಗೊಂಡಿದ್ದು , ತನಿಖೆ ಮುಂದುವರೆದಿದೆ.
ಈ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸುವಲ್ಲಿ ಶ್ರಮಿಸಿದ ಪಿಐ ಎಪಿಎಂಸಿ ಸಿಬ್ಬಂದಿಯವರ ತಂಡಕ್ಕೆ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಶ್ಲಾಘಿಸಿದ್ದಾರೆ.