ಬೆಳಗಾವಿ: ವಾಹನ ಕಳ್ಳತನ ಪ್ರಕರಣಗಳ ಪತ್ತೆ ಕುರಿತು ತನಿಖೆ ನಡೆಸಿದ ಬೆಳಗಾವಿಯ ಎಪಿಎಂಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಒಟ್ಟು 13 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ಉಮೇಶ ಹನುಮಂತ ಬಾಗೇವಾಡಿ( (33) ಹಾಗೂ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಮೌಲಾ ಹಸನಸಾಬ ಹಲಕರ್ಣಿ (48) ಬಂಧಿತರು. ಈ ಆರೋಪಿಗಳಿಂದ ಒಟ್ಟು 5,35,000/- ರೂ ಮೌಲ್ಯದ 13 ಬೈಕ್ ಗಳನ್ನು ಎಪಿಎಂಸಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.


