ಬೆಳಗಾವಿ : ಶಬರಿಮಲೈಗೆ ತೆರಳುತ್ತಿದ್ದಾಗ ರೈಲಿನಿಂದ ಬಿದ್ದು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕಲ್ಲೊಳ್ಳಿಯ ಮಹಿಳಾ ವೃತಧಾರಿ ಮೃತಪಟ್ಟಿದ್ದಾರೆ.
ದಿ.ಗೋವಿಂದಪ್ಪ ಅವರ ಪುತ್ರಿ ಕಸ್ತೂರಿ ಖಾನಗೌಡರ(58) ಮೃತಪಟ್ಟಿದ್ದಾರೆ. ಕೇರಳದ ಉಪ್ಪಳ ರೈಲ್ವೆ ನಿಲ್ದಾಣ ಬಳಿ ಘಟನೆ ನಡೆದಿದೆ. ಇವರ ತಂಡದಲ್ಲಿ 12 ಮಹಿಳೆಯರು ಸೇರಿದಂತೆ ಜನ ಜನ ಇದ್ದರು ಎಂಬ ಮಾಹಿತಿ ಇದ್ದು, ಸೋಮವಾರ ಘಟನೆ ಸಂಭವಿಸಿದೆ.
ಶಬರಿಮಲೈಗೆ ತೆರಳುತ್ತಿದ್ದಾಗ ರೈಲಿನಿಂದ ಬಿದ್ದು ಬೆಳಗಾವಿ ಕಲ್ಲೊಳ್ಳಿಯ ಮಹಿಳಾ ವೃತಧಾರಿ ಸಾವು
