ಬೆಳಗಾವಿ; ಬೆಳಗಾವಿ ಜಿಎಸ್ಟಿ ಗುಪ್ತಚಾರ ನಿರ್ದೇಶಾಲಯ (ಡಿಜಿಡಿಐ) ವಲಯ ಘಟಕದ ಅಧಿಕಾರಿಗಳು ಹರಿಹರದ ಮೇ.ಮರಿಯಂ ಡೀಲರ್ಗಳ ಆವರಣದಲ್ಲಿ ಸುಮಾರು 21.64 ಕೋಟಿ ರೂಪಾಯಿ ಮೌಲ್ಯದ ಜಿಎಸ್ಟಿ ವಂಚನೆ ಪತ್ತೆ ಮಾಡಿದ್ದಾರೆ.
ಪ್ರಮುಖ ಆರೋಪಿ ಮಹಮ್ಮದ್ ಸಕ್ಲೈನ ನ್ನು ಬಂಧಿಸಿ ಬೆಳಗಾವಿ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 14 ದಿನಗಳ ನ್ಯಾಯಾಂಗ ಬಂದನಕೆ ಒಪ್ಪಿಸಲಾಗಿದೆ ಎಂದು ಬೆಳಗಾವಿ ವಲಯದ ಜಿಎಸ್ಟಿ ಗುಪ್ತಚಾರ ನಿರ್ದೇಶಾಲಯದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
112.00 ಕೋಟಿ ಮೌಲ್ಯದ ನಕಲಿ ಇನ್ ವಾಯ್ಸ್ ನೀಡಿರುವುದು ಬೆಳಕಿಗೆ ಬಂದಿದೆ. 17.14 ಕೋಟಿ ಮೌಲ್ಯದ ಇನ್ ಫುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆಯಾಗಿದೆ. ಸಂಸ್ಥೆಯ ಮೊಹಮ್ಮದ್ ಸಕ್ಲೈನ್ ನಕಲಿ ಬಿಲ್ ಮೂಲಕ ಐಟಿಸಿಯ ವಂಚನೆ ನಡೆಸಿರುವುದಾಗಿ ಒಪ್ಪಿದ್ದಾರೆ. ರಿವರ್ಸ್ ಚಾರ್ಜ್ ಮೆಕಾನಿಸಂ (RCM)ಅಡಿ 4. 50 ಕೋಟಿ ಜಿಎಸ್ಟಿಯ ಕಡಿಮೆ ಪಾವತಿಯನ್ನು ಅವರು ಒಪ್ಪಿದ್ದಾರೆ.
ತೆರಿಗೆದಾರರು ನೋಂದಾಯಿಸದ ಪೂರೈಕೆದಾರರಿಂದ ಲೋಹದ ಸ್ಕ್ರಾಪ್ ಹೆಚ್ಚಾಗಿ ಖರೀದಿ ಮಾಡಿದ್ದಾರೆ. ಆದರೆ ಅದರಲ್ಲಿ ಐಟಿಸಿ ಲಭ್ಯವಿಲ್ಲ. ಹೆಚ್ಚುವರಿಯಾಗಿ ನೋಂದಾಯಿತ ಸಂಸ್ಥೆಗಳಿಂದ ಈ ಸಂಸ್ಥೆ ಹೆಚ್ಚಿನ ಖರೀದಿಗಳು ಅಸ್ತಿತ್ವದಲ್ಲಿ ಇಲ್ಲದ ಅಥವಾ ಕಾಲ್ಪನಿಕ ಸಂಸ್ಥೆಗಳಿಂದ ಬಂದಿವೆ.
ಮೇ. ಮರಿಯಂ ಸ್ಕ್ರಾಪ್ ಡೀಲರ್ಗಳು ನೋಂದಾಯಿಸದ ವಿತರಕರಿಂದ ನಿಜವಾದ ಖರೀದಿಗಳನ್ನು ಐಟಿಸಿಗಳೊಂದಿಗೆ ನಕಲಿ ಸಂಸ್ಥೆಗಳಿಂದ ಪಡೆದಿದ್ದಾರೆ. ಕಮಿಷನ್ ಗೆ ನಕಲಿ ಇನ್ವಾಯ್ಸ್ ನೀಡುವ ಉದ್ದೇಶದಿಂದ ನೋಂದಣಿ ಪಡೆಯಲು ನಕಲಿ ದಾಖಲೆ ಬಳಸಿರುವುದು ಸಹ ತನಿಖೆ ವೇಳೆ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,