ಬೆಳಗಾವಿ : ಬೆಳಗಾವಿ ಸೇರಿದಂತೆ ನಾಡಿನೆಲ್ಲೆಡೆ ಗಣೇಶೋತ್ಸವ ಸಂಭ್ರಮಕ್ಕೆ ಇದೀಗ ಕ್ಷಣಗಣನೆ ನಡೆದಿದೆ. ಗೌರಿ-ಗಣೇಶ ಹಬ್ಬವನ್ನು ಸ್ವಾಗತಿಸಲು ಜನ ತುದಿಗಾಗಲ್ಲಿ ನಿಂತಿದ್ದಾರೆ. ಭಾದ್ರಪದ ಶುಕ್ಲ ಚೌತಿಯಂದು ಗೌರಿ-ಗಣೇಶನ ಆಗಮನವನ್ನು ಸ್ವಾಗತಿಸಲು ಜನ ಸಜ್ಜಾಗಿದ್ದಾರೆ. ಮಾರುಕಟ್ಟೆಯಲ್ಲಿ ಇದೀಗ ಭಾರಿ ಜನದಟ್ಟಣೆ ಕಂಡು ಬಂದಿದೆ. ಹಬ್ಬದ ಸಂದರ್ಭದಲ್ಲಿ ಈ ಸಲವು ಎಂದಿನಂತೆ ಹೂ ಮತ್ತು ಹಣ್ಣುಗಳ ಬೆಲೆ ಹೆಚ್ಚಾಗಿದೆ. ಇದು ಗ್ರಾಹಕರ ಪಾಲಿಗೆ ತುಸು ಬಿಸಿ ಮುಟ್ಟಲು ಕಾರಣವಾಗಿದೆ.
ಬೆಳಗಾವಿ ಗಣೇಶೋತ್ಸವಕ್ಕೆ ಶತಮಾನದ ಹಿನ್ನೆಲೆ ಇದೆ. ನಗರದ ಬೀದಿ-ಬೀದಿಗಳಲ್ಲಿ ನೂರಾರು ಗಣಪತಿಗಳನ್ನು ಇಡಲಾಗುತ್ತಿದೆ. ಭಕ್ತರು 11 ದಿನಗಳ ಕಾಲ ಸಂಭ್ರಮದಿಂದ ಗಣೇಶೋತ್ಸವದ ಸವಿಯನ್ನು ಸವಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಬೀದಿ- ಬೀದಿಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಜನರನ್ನು ತಮ್ಮತ್ತ ಸೆಳೆಯುತ್ತಿವೆ.