ಬೆಳಗಾವಿ :
ಕೆಎಲ್ ಇ ಸಂಸ್ಥೆಯ ಜಿ.ಎ. ಪದವಿಪೂರ್ವ ಮಹಾವಿದ್ಯಾಲಯದ 2022- 2023 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಭೂತರಾಮನಹಟ್ಟಿ ಮುಕ್ತಿಮಠದಲ್ಲಿ ನಡೆಯಿತು.
ಸಮಾರಂಭದಲ್ಲಿ ಹೊಸ ವಂಟಮುರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮಪ್ಪ ಹಂಚಿನಮನಿ ಮಾತನಾಡಿ, ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ಯುವ ಜನರು ನಗರಗಳಿಗೆ ವಲಸೆ ಹೋಗುವುದನ್ನು ಕಡಿಮೆ ಮಾಡಬೇಕು. ತಮ್ಮನ್ನು ತಾವು ಗ್ರಾಮೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರ್.ಎಸ್.ಪಾಟೀಲ ಮಾತನಾಡಿ, ಗಾಂಧೀಜಿಯವರು ಕಂಡ ಗ್ರಾಮ ಭಾರತ ಪರಿಕಲ್ಪನೆ ಸಾಕಾರವಾಗಬೇಕಾದರೆ ಗ್ರಾಮಗಳ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಗಾಂಧೀಜಿಯವರು ಹೇಳಿರುವಂತೆ ನೀನು ಭಾರತವನ್ನು ನೋಡುವುದಾದರೆ ಹಳ್ಳಿಗಳಿಗೆ ಬಾ. ಇಂಡಿಯಾವನ್ನು ನೋಡಬೇಕಾದರೆ ನಗರಗಳಿಗೆ ಹೋಗು ಎಂಬ ಮಾತಿನಂತೆ ಗ್ರಾಮ ಭಾರತ ತನ್ನ ಶ್ರೇಷ್ಠತೆಯನ್ನು ತೋರಿಸುತ್ತದೆ. ಏಕೆಂದರೆ ಭಾರತದ ಶೇಕಡಾ 70ರಷ್ಟು ಜನಸಂಖ್ಯೆ ಈಗಲೂ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದರು. ಸಮಾರೋಪ ಸಮಾರಂಭದಲ್ಲಿ ಎನ್ ಎಸ್ ಎಸ್ ಘಟಕದ ಸಹಾಯಕ ಶಿಬಿರ ಅಧಿಕಾರಿ ಲಲಿತ ಅಕ್ಕಿ ಸ್ವಾಗತಿಸಿದರು. ಸಹಾಯಕ ಶಿಬಿರಾರ್ಥಿ ಡಿ.ಎಸ್. ಪವಾರ್ ಶಿಬಿರದ ಉದ್ದೇಶ ತಿಳಿಸಿದರು. ಎನ್ಎಸ್ಎಸ್ ಏಳು ದಿನಗಳವರೆಗೆ ಭೂತ ರಾಮನ ಹಟ್ಟಿ ಹಾಗೂ ಪಂಚಗ್ರಾಮ ಮುಕ್ತಿ ಮಠದಲ್ಲಿ ಹಮ್ಮಿಕೊಂಡ ವಿವಿಧ ಸೇವಾ ಕಾರ್ಯಗಳ ಬಗ್ಗೆ ವಿವರ ನೀಡಿದರು. ಶಿಬಿರಾರ್ಥಿಗಳಾದ ಸಚಿನ್ ಲಮಾಣಿ, ವಂದನಾ ರಾಠೋಡ್ ಏಳು ದಿನಗಳ ಕಾಲ ನಡೆದ ಶಿಬಿರದ ಸಿಹಿ ಅನುಭವವನ್ನು ಹಂಚಿಕೊಂಡರು. ಹಿರಿಯರಾದ ರಾಮ ಜುಂಟ ಹಾಗೂ ಕಲ್ಲಪ್ಪ ನಾಯಿಕ್ ಭಾಗವಹಿಸಿದ್ದರು.