ಬೆಳಗಾವಿ ಜನ ಜೀವಾಳ ಜಾಲ: ನಗರದ ಕೆ.ಎಲ್.ಇ. ಜಿ.ಎ.ಸಂಯುಕ್ತ ಮಹಾವಿದ್ಯಾಲಯದಲ್ಲಿ ಸಡಗರದ 77 ನೆಯ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಆಜೀವ ಸದಸ್ಯ ಮಹಾದೇವ ಬಳಿಗಾರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಪ್ರಾಚಾರ್ಯ ಆರ್.ಎಸ್.ಪಾಟೀಲ ಧ್ವಜಾರೋಹಣ ನೆರವೇರಿಸಿ ಸ್ವಾತ್ರಂತ್ರ್ಯದ ಪ್ರಚಲಿತ, ಗತಕಾಲದ ಇತಿಹಾಸದ ಘಟನೆಗಳನ್ನು ಹಾಗೂ ಆಧುನಿಕ ಭಾರತದ ಪರಿಕಲ್ಪನೆಯನ್ನು ಮೆಲುಕು ಹಾಕಿದರು. ಉಪ-ಪ್ರಾಚಾರ್ಯ ಎಸ್.ಆರ್.ಗದಗ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಆರ್.ಎಮ್. ಮಗದುಮ್ಮ, ಧನಾಜಿ ಪವಾರ ಉಪಸ್ಥಿತರಿದ್ದರು.
ಭಾರತ ಸ್ಕೌಟ್ಸ್ ಗೈಡ್ಸ್, ಎನ್ .ಸಿ. ಸಿ ವಿದ್ಯಾರ್ಥಿಗಳಿಂದ ಸಾಮಾಜಿಕ ಕಾರ್ಯಗಳು ಜರುಗಿದವು. ವಿದ್ಯಾರ್ಥಿಗಳು ಸ್ವಾತಂತ್ರ್ಯದ ಭಾಷಣ, ದೇಶಭಕ್ತಿ ಗೀತೆ ಹಾಗೂ ಛೇಧ್ಮವೇಷ ಅಭಿನಯ ಪ್ರದರ್ಶಿಸಿದರು. ಜನ ಸಾಹಿತ್ಯ ಪೀಠ ಛದ್ಮವೇಷ ಪಾತ್ರಧಾರಿಗಳಿಗೆ ಗೌರವ ಕಾಣಿಕೆ ನೀಡಿತು. ಶ್ರೀದೇವಿ ಗಂಗಾಪುರ ಸ್ವಾಗತಿಸಿದರು. ವಿಶಾಲಾಕ್ಷಿ ಅಂಗಡಿ ನಿರೂಪಿಸಿದರು.